ಮಾಸ್ಕೊ: ಕಾರಿನಲ್ಲಿ ಬಾಂಬ್ ಸ್ಫೋಟಗೊಂಡು ರಷ್ಯಾದ ಲೆಫ್ಟಿನೆಂಟ್ ಜನರಲ್ ಫಾನಿಲ್ ಸರ್ವೋವ್ ಅವರು ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ದಾಳಿಯ ಹಿಂದೆ ಉಕ್ರೇನ್ ಕೈವಾಡವಿರಬಹುದು. ವರ್ಷದಲ್ಲಿ ಮೂರನೇ ಬಾರಿಗೆ ರಷ್ಯಾ ಸೇನೆಯ ಹಿರಿಯ ಅಧಿಕಾರಿಗಳನ್ನು ಹತ್ಯೆಗೈದಿರುವ ಪ್ರಕರಣ ಇದಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
'ಸರ್ವೋವ್ ಅವರು ರಷ್ಯಾ ಸೇನಾಪಡೆಯ ಕಾರ್ಯಾಚರಣೆ ತರಬೇತಿ ನಿರ್ದೇಶನಾಲಯದ ಮುಖ್ಯಸ್ಥರಾಗಿದ್ದರು. ಹತ್ಯೆಯ ಕುರಿತು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ' ಎಂದು ಅಪರಾಧ ತನಿಖಾ ದಳದ ವಕ್ತಾರರೊಬ್ಬರು ತಿಳಿಸಿದರು.
ಹತ್ಯೆಯ ಕುರಿತು ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರಿಗೆ ಕೂಡಲೇ ಮಾಹಿತಿ ನೀಡಲಾಗಿದೆ ಎಂದು ಪ್ರಧಾನಿಗಳ ಕಾರ್ಯಾಲಯದ ವಕ್ತಾರರು ತಿಳಿಸಿದರು.

