ಕಾಸರಗೋಡು: ರಾಹುಲ್ ಮಾಂಕೂಟತ್ತಿಲ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಿದ ನಂತರ, ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಪ್ರತಿಕ್ರಿಯಿಸಿ
ಪಕ್ಷದ ಕ್ರಮ ಶ್ಲಾಘನೀಯ ಎಂದಿರುವರು. ರಾಹುಲ್ ಅವರ ಕೃತ್ಯವು ಪಕ್ಷದ ವರ್ಚಸ್ಸಿಗೆ ಕಳಂಕ ತಂದಿದೆ ಎಂದವರು ತಿಳಿಸಿದರು.
ರಾಹುಲ್ ಪಕ್ಷದ ಮೇಲೆ ಯುದ್ಧ ಘೋಷಿಸಿದ್ದರು. ಅದಕ್ಕಾಗಿಯೇ ಅವರು ಈಗ ಅಂತ್ಯವನ್ನು ಎದುರಿಸುತ್ತಿದ್ದಾರೆ. ರಾಹುಲ್ ವಿರುದ್ಧ ಮಾತನಾಡಿದವರ ವಿರುದ್ಧ ಸೈಬರ್ ದಾಳಿಗಳು ನಡೆದವು. ಮಹಿಳಾ ನಾಯಕಿಯರ ವಿರುದ್ಧವೂ ತೀವ್ರ ಸೈಬರ್ ದಾಳಿಗಳು ನಡೆದವು. ಎಷ್ಟೇ ದಾಳಿ ಮಾಡಿದರೂ ಮಾಡಿದ ತಪ್ಪನ್ನು ಸರಿಪಡಿಸಲಾಗದೆಂದು ಅವರು ನೆನಪಿಸಿದರು.
ರಾಹುಲ್ ಅವರಿಂದ ಹಣ ಪಡೆದ ಮಿಡತೆಗಳು ಪಕ್ಷವನ್ನು ಹೈಜಾಕ್ ಮಾಡಲು ಪ್ರಯತ್ನಿಸಿದವು. ಈ ಮಿಡತೆಗಳನ್ನು ನಿರ್ಮೂಲನೆ ಮಾಡಬೇಕು ಎಂದು ರಾಜಮೋಹನ್ ಉಣ್ಣಿತ್ತಾನ್ ಹೇಳಿರುವರು.




