ಬ್ಯಾಂಕಾಕ್: 25 ಜನರು ಮೃತಪಟ್ಟಿದ್ದ ಡಿಸೆಂಬರ್ 6ರ ಗೋವಾ ನೈಟ್ ಕ್ಲಬ್ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ನೈಟ್ ಕ್ಲಬ್‌ನ ಸಹ ಮಾಲೀಕರಾದ ಗೌರವ್ ಲೂಥ್ರಾ ಮತ್ತು ಸೌರಭ್ ಲೂಥ್ರಾ ಅವರನ್ನು ಥೈಲ್ಯಾಂಡ್‌ನಿಂದ ಭಾರತಕ್ಕೆ ಗಡೀಪಾರು ಮಾಡಲಾಗಿದೆ.
ಮಾರಣಾಂತಿಕ ಅಗ್ನಿ ದುರಂತದ ಬಳಿಕ ಎಲ್ಲಡೆಯಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ನೈಟ್ ಕ್ಲಬ್‌ನಲ್ಲಿ ನಿಯಮ ಉಲ್ಲಂಘನೆ ಕುರಿತಂತೆ ನಡೆಯುತ್ತಿದೆ. ಇದರ ಭಾಗವಾಗಿ ಈ ಗಡೀಪಾರು ಮಾಡಲಾಗಿದೆ.
ಅಗ್ನಿ ಅವಘಡ ಸಂಭವಿಸಿದ ಉತ್ತರ ಗೋವಾದ 'ಬಿರ್ಚ್ ಬೈ ರೋಮಿಯೊ ಲೇನ್' ನೈಟ್ ಕ್ಲಬ್‌ನ ಸಹ ಮಾಲೀಕರಾದ ಲೂಥ್ರಾ ಸಹೋದರರು ಅವಘಡ ಸಂಭವಿಸಿದ ಸ್ವಲ್ಪ ಸಮಯದಲ್ಲೇ ಥೈಲ್ಯಾಂಡ್‌ನ ಫುಕೆಟ್‌ಗೆ ಪರಾರಿಯಾಗಿದ್ದರು.
ಭಾರತದ ಅಧಿಕಾರಿಗಳ ಮಧ್ಯಪ್ರದೇಶದ ಬಳಿಕ ಡಿಸೆಂಬರ್ 11ರಂದು ಫುಕೆಟ್‌ನಲ್ಲಿ ಲೂಥ್ರಾ ಸಹೋದರರನ್ನು ಬಂಧಿಸಿದ್ದ ಥೈಲ್ಯಾಂಡ್ ಅಧಿಕಾರಿಗಳು ಗಡೀಪಾರು ಮಾಡಿದ್ದಾರೆ.
ಲೂಥ್ರಾ ಸಹೋದರರು ಬ್ಯಾಂಕಾಕ್ ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶಲ್ಲಿದ್ದ ಬಗ್ಗೆ ಹಲವು ವಿಡಿಯೊಗಳು ಹರಿದಾಡುತ್ತಿವೆ. ಅವರು ಭಾರತದಲ್ಲಿ ಇಳಿದ ತಕ್ಷಣ ಅಧಿಕಾರಿಗಳು ವಶಕ್ಕೆ ಪಡೆಯಲಿದ್ದಾರೆ.
ಘಟನೆ ಸಂಬಂಧ, ನೈಟ್ ಕ್ಲಬ್‌ನ ಐವರು ಮ್ಯಾನೇಜರ್‌ಗಳು ಮತ್ತು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

