HEALTH TIPS

ಎಟಿಎಂ ಮತ್ತು ಯುಪಿಐ ಮೂಲಕ ಪಿಎಫ್ ಹಣ ಡ್ರಾ, ಕೇಂದ್ರದಿಂದ ಮಹತ್ವದ ಘೋಷಣೆ; ಡಿಜಿಟಲ್‌ ಪೋಷಣೆ

ನವದೆಹಲಿ: ದೇಶದ ನೌಕರ ವರ್ಗಕ್ಕೆ ಧ್ವನಿಯಾಗುವಂತ ಮತ್ತೊಂದು ಹೆಜ್ಜೆಯಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನೌಕರರ ಭವಿಷ್ಯ ನಿಧಿಗೆ ವಿಶಿಷ್ಟ ಸೌಲಭ್ಯವೊಂದನ್ನು ಜೋಡಿಸುವ ಕುರಿತು ಮುನ್ಸೂಚನೆ ನೀಡಿದೆ.ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಚಂದಾದಾರರು ತಮ್ಮ ನೌಕರರ ಭವಿಷ್ಯ ನಿಧಿಯನ್ನು (EPF) ಇನ್ನು ಮುಂದೆ, ಎಟಿಎಂ ಮತ್ತು ಯುಪಿಐ ವ್ಯವಸ್ಥೆ ಮೂಲಕ ಪಡೆದುಕೊಳ್ಳಲು ಅನುವು ಮಾಡಿಕೊಡುವ ಡಿಜಿಟಲ್‌ ವ್ಯವಸ್ಥೆಯೊಂದನ್ನು ಶೀಘ್ರದಲ್ಲೇ ಪರಿಚಯಿಸಲು ಕೇಂದ್ರ ಕಾರ್ಮಿಕ ಇಲಾಖೆ ನಿರ್ಧರಿಸಿದೆ.
ಈ ಕುರಿತು ಖಾಸಗಿ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕೇಂದ್ರ ಕಾರ್ಮಿಕ ಸಚಿವ ಮನ್ಸುಖ್‌ ಮಾಂಡವಿಯಾ, "ನೌಕರರು ತಮ್ಮ ಪಿಎಫ್‌ ಹಣವನ್ನು ಎಟಿಎಂ ಮತ್ತು ಯುಪಿಯನಿಂದಲೇ ಪಡೆದುಕೊಳ್ಳಲು ಸಾಧ್ಯವಾಗುವಂತ ಡಿಜಿಟಲ್‌ ವ್ಯವಸ್ಥೆ ಬರಲಿದೆ" ಎಂದು ಸ್ಪಷ್ಟಪಡಿಸಿದರು. ಎಟಿಎಂ ಮೂಲಕ ಪಿಎಫ್‌ ಹಣ ಡ್ರಾ ವ್ಯವಸ್ಥೆ ಇದೀಗ ತೀವ್ರ ಚರ್ಚೆಗೆ ಒಳಪಟ್ಟಿದೆ.
"ಆದರೆ ನೌಕರರು ತಮ್ಮ ಒಟ್ಟು ಭವಿಷ್ಯ ನಿಧಿಯ ಶೇ.75ರಷ್ಟನ್ನು ಮಾತ್ರ ತಕ್ಷಣ ಹಿಂಪಡೆಯಬಹುದಾಗಿದ್ದು, ಮಾರ್ಚ್ 2026ರ ಮೊದಲು ಈ ವ್ಯವಸ್ಥೆ ಜಾರಿಗೆ ಬರುವ ಸಾಧ್ಯತೆ ಇದೆ" ಎಂದು ಮನ್ಸುಖ್‌ ಮಾಂಡವಿಯಾ ಸಂದರ್ಶನದಲ್ಲಿ ತಿಳಿಸಿದ್ದಾರೆ. ಇಪಿಎಫ್‌ ಹಿಂಪಡೆಯುವಿಕೆಗಳನ್ನು ಯುಪಿಐನೊಂದಿಗೆ ಜೋಡಿಸುವ ಕೇಂದ್ರ ಕಾರ್ಮಿಕ ಸಚಿವಾಲಯದ ಈ ಹೆಜ್ಜೆ ಭಾರೀ ಮಹತ್ವ ಪಡೆದುಕೊಂಡಿದೆ.

ಇಪಿಎಫ್‌ನಲ್ಲಿರುವ ಹಣವು ಚಂದಾದಾರರಿಗೆ ಸೇರಿದ್ದು, ಆದರೆ ಪ್ರಸ್ತುತ ಈ ಹಣವನ್ನು ಹಿಂಪಡೆಯಬೇಕೆಂದರೆ ವಿವಿಧ ನಮೂನೆಗಳ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದು ಅನೇಕ ಸದಸ್ಯರಿಗೆ ತೊಂದರೆಯನ್ನುಂಟು ಮಾಡುತ್ತಿರುವುದರಿಂದ, ಇಪಿಎಫ್‌ ಹಣ ಹಿಂಪಡೆಯುವ ಮಾರ್ಗವನ್ನು ಸುಲಭಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ಮಾಂಡವಿಯಾ ಹೇಳಿದ್ದಾರೆ.

ಇಪಿಎಫ್‌ಒ 3.0 ಯೋಜನೆ ಎಂದೇ ಹೇಳಲಾಗುತ್ತಿರುವ ಈ ಡಿಜಿಟಲ್‌ ವ್ಯವಸ್ಥೆಯು, ನೌಕರರು ತಮ್ಮ ಭವಿಷ್ಯ ನಿಧಿಯನ್ನು ತ್ವರಿತವಾಗಿ ಮತ್ತು ನೇರವಾಗಿ ಪಡೆಯುವಂತೆ ಪ್ರೆರೇಪಿಸುತ್ತದೆ. ಈ ಯೋಜನೆ 2025ರಲ್ಲಿ ಇಪಿಎಫ್‌ಓ ಅನುಮೋದಿಸಿದ ಸುಧಾರಣೆಗಳ ಭಾಗವಾಗಿದೆ. ಭವಿಷ್ಯ ನಿಧಿ ಪ್ರಕ್ರಿಯೆಗಳನ್ನು ಸರಳ ಮತ್ತು ಪಾರದರ್ಶಕವನ್ನಾಗಿಸುವ ಗುರಿಯನ್ನು ಈ ಸುಧಾರಣಾ ಕ್ರಮಗಳು ಹೊಂದಿವೆ.
ಎಲ್ಲಾ ರೀತಿಯ ಇಪಿಎಫ್ ಹಿಂಪಡೆಯುವಿಕೆಗಳಿಗೆ ಏಕರೂಪದ 12 ತಿಂಗಳುಗಳ ಅವಧಿ ನಿಗದಿ ಮಾಡಲಾಗಿದ್ದು, ಪರಿಷ್ಕೃತ ಚೌಕಟ್ಟಿನ ಅಡಿಯಲ್ಲಿ ಹಿಂಪಡೆಯಬಹುದಾದ ಮೊತ್ತವು, ಉದ್ಯೋಗಿ ಉದ್ಯೋಗದಾತ ಮತ್ತು ಬಡ್ಡಿಯ ಕೊಡುಗೆಗಳನ್ನು ಒಳಗೊಂಡಿರುತ್ತದೆ.

ಈ ಹಿಂದೆ ಇಪಿಎಫ್ ಹಿಂಪಡೆಯುವಿಕೆ ಪ್ರಮಾಣವು ನಿರ್ದಿಷ್ಟ ಕಾರಣವನ್ನು ಆಧರಿಸಿ ಶೇ. 50ರಿಂದ ಶೇ.100ರೊಳಗೆ ಇರುತ್ತಿತ್ತು. ನಡುವೆ ಸೀಮಿತವಾಗಿತ್ತು. ಈಗ ಅದನ್ನು ಶೇ.75ರಷ್ಟಕ್ಕೆ ನಿರ್ದಿಷ್ಟಪಡಿಸಲಾಗಿದ್ದು, ಅರ್ಹತೆಯಲ್ಲೂ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಅಂದರೆ ಕಾರ್ಮಿಕ ಇಲಾಖೆ ಕಾರಣಗಳ ಆಯ್ಕೆಯನ್ನು ಹೆಚ್ಚಿಸಲಿದೆ.

ಹೊಸ ನಿಯಮದಡಿಯಲ್ಲಿ ನಿರುದ್ಯೋಗ ಪರಿಸ್ಥಿತಿ ಎದುಇರಿಸುತ್ತಿರುವ ಯಾವುದೇ ವ್ಯಕ್ತಿ, ತನ್ನ ಪಿಎಫ್ ಬಾಕಿಯ ಶೇ. 75ರಷ್ಟನ್ನು ತಕ್ಷಣವೇ ಹಿಂಪಡೆಯಬಹುದು. ಅದರಂತೆ ಉಳಿದ ಶೇ. 25ರಷ್ಟು ಪಾಲನ್ನು ಒಂದು ವರ್ಷದ ನಂತರ ಹಿಂಪಡೆಯುವ ಅವಕಾಶ ಒದಗಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries