ತಿರುವನಂತಪುರಂ: ಮತದಾನದ ಮರುದಿನವೂ ಕೆಲಸದ ದಿನವಾಗಿದ್ದಲ್ಲಿ, ಚುನಾವಣಾ ಕರ್ತವ್ಯದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಆ ದಿನವೂ ಚುನಾವಣಾ ಕರ್ತವ್ಯದ ರಜೆಯಾಗಿ ಮಂಜೂರುಗೊಳಿಸುವಂತೆ ರಾಜ್ಯ ಚುನಾವಣಾ ಆಯುಕ್ತ ಎ. ಶಹಜಹಾನ್ ಸಂಬಂಧಪಟ್ಟ ಇಲಾಖೆ ಮತ್ತು ಕಚೇರಿ ಮುಖ್ಯಸ್ಥರಿಗೆ ನಿರ್ದೇಶನ ನೀಡಿದ್ದಾರೆ.
ಮತದಾನ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳ ಕರ್ತವ್ಯದ ಅವಧಿಯು ಚುನಾವಣೆಯ ಹಿಂದಿನ ದಿನದ ಬೆಳಗ್ಗೆಯಿಂದ (ಮತದಾನ ಸಾಮಗ್ರಿಗಳ ವಿತರಣೆಯ ದಿನ) ಮತದಾನದ ದಿನದವರೆಗೆ ಇರುತ್ತದೆ. ಮತದಾನದ ಸಾಮಗ್ರಿಗಳನ್ನು ಸ್ವಾಗತ ಕೇಂದ್ರಕ್ಕೆ ಹಿಂತಿರುಗಿಸುವವರೆಗೆ ಈ ಪ್ರಯೋಜನ ಲಭ್ಯವಿರಲಿದೆ. ಬಹುತೇಕ ಸಂದರ್ಭ ಮತದಾನದ ದಿನದಂದು ತಡರಾತ್ರಿ ಅಥವಾ ಮರುದಿನ ಬೆಳಗ್ಗಿನ ವರೆಗೂ ಮತದಾನದ ಸಾಮಗ್ರಿ ಸಲ್ಲಿಸುವ ಪ್ರಕ್ರಿಯೆ ನಡೆಯುತ್ತಿರುವುದರಿಂದ ಆ ದಿನವನ್ನೂ ರಜೆಯಾಗಿ ಪರಿಗಣಿಸಬೇಕು ಎಂದು ಸೂಚಿಸಲಾಗಿದೆ.

