ಕಾಸರಗೋಡು: ಕೇರಳ ರಾಜ್ಯ 26ನೇ ವಿಶೇಷ ಶಾಲಾ ಕಲೋತ್ಸವದಲ್ಲಿ ಚೆರ್ಕಳ ಮಾರ್ತೋಮಾ ವಿಶೇಷ ಶಾಲೆ ಕಲಾ ಪ್ರಶಸ್ತಿಯನ್ನು ಗೆದ್ದುಗೊಂಡಿತು. ಕಲೋತ್ಸವ ವಿಜೇತ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು.
ಕಾಸರಗೋಡು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಟಿ.ವಿ. ಮಧುಸೂದನನ್ ಸಮಾರಂಭ ಉದ್ಘಾಟಿಸಿದರು. ಶಾಲಾ ಆಡಳಿತಾಧಿಕಾರಿ ಫಾದರ್ ಮ್ಯಾಥ್ಯೂ ಬೇಬಿ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಪೆÇಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ವಿಜಯನ್ ಮೇಲತ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿಜೇತ ಮಕ್ಕಳಿಗೆ ಸ್ಮರಣಿಕೆ ಮತ್ತು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು. ಪಿಟಿಎ ಅಧ್ಯಕ್ಷೆ ಬಿನ್ಸಿ ಎನ್.ಎಚ್, ಉಪಾಧ್ಯಕ್ಷ ಅಬ್ದುಲ್ಲಕುಞÂ, ಬೆನ್ಸಿ ಟಿ, ಯಮುನಾ ಜಿ ಉತ್ತಮನ್, ರೂಬಿ ಆಂಟನಿ, ಮತ್ತು ಬಿಜುಮನ್ ಸಿ ಉಪಸ್ಥಿತರಿದ್ದರು. ಈ ಸಂದರ್ಭ ತರಬೇತುದಾರರಾದ ಉದಯನ್ ಕುಂಡಂಗುಯಿ, ಬಾಬು ಪಿಲಿಕೋಡ್, ಅಖಿಲೇಶ್ ಪೈಕ, ನಿತ್ಯ ನಾರಾಯಣನ್, ಮಹೇಶ್ ಮತ್ತು ಬಿಂದು ಅವರನ್ನು ಸನ್ಮಾನಿಸಲಾಯಿತು. ಸಿಬ್ಬಂದಿ ಕಾರ್ಯದರ್ಶಿ ಜೋಶಿಮನ್ ಕೆ.ಟಿ ಸ್ವಾಗತಿಸಿದರು. ಪ್ರಾಂಶುಪಾಲೆ ಶೀಲಾ ವಂದಿಸಿದರು. ಪ್ರಶಸ್ತಿವಿಜೇತ ಮಾರ್ತೋಮ ಶಾಲೆ ಕಲಾ ಪ್ರತಿಭೆಗಳನ್ನು ಚೆರ್ಕಳ ಪಟ್ಟಣದಿಂದ ಸಂಗೀತ ವಾದ್ಯಗಳ ಹಿಮ್ಮೇಳದೊಂದಿಗೆ ಶಾಲೆಗೆ ಕರೆದೊಯ್ಯಲಾಯಿತು.
ನವೆಂಬರ್‍ನಲ್ಲಿ ಮಲಪ್ಪುರಂನ ತಿರೂರಿನಲ್ಲಿ ನಡೆದ ಕಲೋಲ್ಸವದಲ್ಲಿ ಮಾರ್ಥೋಮಾ ಶಾಲೆ ಶೇ.ನೂರು ಅಂಕ ಗಳಿಸುವ ಮೂಲಕ ಪ್ರಶಸ್ತಿ ಗೆದ್ದುಕೊಂಡಿತ್ತು.


