ತಿರುವನಂತಪುರಂ: ಅಸಭ್ಯ ವರ್ತನೆ ಆರೋಪದ ಮೇಲೆ ಚಲನಚಿತ್ರ ಕಾರ್ಯಕರ್ತೆಯೊಬ್ಬರು ನೀಡಿದ ದೂರಿನ ಮೇರೆಗೆ, ಪೋಲೀಸರು ಪ್ರಮುಖ ನಿರ್ದೇಶಕ, ಮಾಜಿ ಶಾಸಕ ಮತ್ತು ಎಲ್‍ಡಿಎಫ್ ಕಾರ್ಯಕರ್ತ ಪಿ.ಟಿ. ಕುಂಞಮುಹಮ್ಮದ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದಡಿಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ತಿಂಗಳ ಹಿಂದೆ ಮುಖ್ಯಮಂತ್ರಿಗೆ ಚಲನಚಿತ್ರ ಕಾರ್ಯಕರ್ತೆ ಸಲ್ಲಿಸಿದ್ದ ದೂರನ್ನು ನಗರ ಪೆÇಲೀಸ್ ಆಯುಕ್ತರಿಗೆ ರವಾನಿಸಲಾಗಿದೆ. ಐಎಫ್‍ಎಫ್‍ಕೆ ಪ್ರದರ್ಶನದ ಸಮಯದಲ್ಲಿ ನಗರ ಕೇಂದ್ರದಲ್ಲಿರುವ ಹೋಟೆಲ್ ಕೋಣೆಯಲ್ಲಿ ಪಿ.ಟಿ. ಕುಂಞಮುಹಮ್ಮದ್ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೋಲೀಸರು ಚಲನಚಿತ್ರ ಕಾರ್ಯಕರ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಹೋಟೆಲ್‍ನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದೂರುದಾರರು ಹೇಳಿದ ಸಮಯದಲ್ಲಿ ಇಬ್ಬರೂ ಹೋಟೆಲ್‍ನಲ್ಲಿದ್ದರು ಎಂಬುದು ಸ್ಪಷ್ಟವಾಯಿತು.
30 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಮಲಯಾಳಂ ಚಲನಚಿತ್ರಗಳನ್ನು ಆಯ್ಕೆ ಮಾಡಲು ಇಬ್ಬರೂ ತೀರ್ಪುಗಾರರ ಸದಸ್ಯರಾಗಿದ್ದಾರೆ.

