HEALTH TIPS

ನಕಲಿ ಔಷಧಗಳನ್ನು ಸಾಪ್ಟ್‌ವೇರ್ ಮೂಲಕ ಪತ್ತೆ ಮಾಡುತ್ತದೆ ಈ ಯಂತ್ರಗಳು..

ಮುಂಬೈ: ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ನಕಲಿ ಔಷಧ ಮಾರಾಟವನ್ನು ತಡೆಗಟ್ಟುವ ಉದ್ದೇಶದಿಂದ, ಕಲಬೆರಕೆ ಅಥವಾ ನಕಲಿ ಔಷಧಗಳನ್ನು ಪತ್ತೆ ಮಾಡುವ ಸಾಧನಗಳನ್ನು ಕೊಂಡುಕೊಳ್ಳಲು ಮಹಾರಾಷ್ಟ್ರ ಸರ್ಕಾರವು ಮುಂದಾಗಿದೆ.

ನಕಲಿ ಔಷಧಗಳನ್ನು ಪತ್ತೆ ಮಾಡುವ ಸಾಧನಗಳನ್ನು ಖರೀದಿ ಮಾಡುವ ಉದ್ದೇಶದಿಂದ ₹ 9.59 ಕೋಟಿ ಹಣವನ್ನು ಬುಧವಾರ ಬಿಡುಗಡೆಗೊಳಿಸಲಾಗಿದೆ.

ಒಂದಕ್ಕೆ ₹ 1.19 ಕೋಟಿ ಬೆಲೆಯಿದ್ದು, ಒಟ್ಟು 8 ಮಿಷನ್‌ಗಳನ್ನು ಖರೀದಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಾಧನಗಳನ್ನು ಮಹಾರಾಷ್ಟ್ರದ ಠಾಣೆ, ಪುಣೆ, ಕೊಲ್ಹಾಪುರ, ನಾಸಿಕ್, ಛತ್ರಪತಿ ಸಂಭಾಜಿ ನಗರ, ಅಲೋಕ, ಲಾತೂರ್ ಹಾಗೂ ನಾಗ್ಪುರಗಳಲ್ಲಿ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಔಷಧಗಳಲ್ಲಿನ ರಾಸಾಯನಿಕ ಅಂಶಗಳ ಪ್ರಮಾಣವನ್ನು ಈ ಮಿಷನ್‌ಗಳು ಸಾಪ್ಟ್‌ವೇರ್ ಮೂಲಕ ಪತ್ತೆ ಮಾಡುತ್ತವೆ. ಈ ಮೂಲಕ ಔಷಧಗಳ ಗುಣಮಟ್ಟವನ್ನು ಅತಿ ಸುಲಭವಾಗಿ ಪತ್ತೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries