HEALTH TIPS

ಅಶ್ಲೀಲ, ಕಾನೂನು ಬಾಹಿರ ಅಂಶ: ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಎಚ್ಚರಿಕೆ

 ನವದೆಹಲಿ: ಅಶ್ಲೀಲ ಮತ್ತು ಕಾನೂನು ಬಾಹಿರ ಅಂಶಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ನಿರ್ದೇಶನದ ಪಾಲನೆಯಲ್ಲಿ ವಿಫಲವಾದಲ್ಲಿ ದುಷ್ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.


'ಕಾನೂನುಬಾಹಿರ ವಿಷಯವನ್ನು ಗುರುತಿಸುವಲ್ಲಿ ಮತ್ತು ಅದನ್ನು ತೆಗೆದು ಹಾಕುವಲ್ಲಿ ಹೆಚ್ಚಿನ ಸ್ಥಿರತೆಯ ಅಗತ್ಯವಿದೆ' ಎಂದು ಸಾಮಾಜಿಕ ಮಾಧ್ಯಮ ಸಂಸ್ಥೆಗಳಿಗೆ ವಿದ್ಯುನ್ಮಾನ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಸುತ್ತೋಲೆ ಮೂಲಕ ಹೇಳಿದೆ.

'ಕೆಲವು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಅಶ್ಲೀಲ, ಕಾನೂನುಬಾಹಿರ, ಅಸಮಂಜಸ ಅಂಶಗಳ ವಿರುದ್ಧ ಕಠಿಣ ಕ್ರಮ ಜರುಗಿಸದಿರುವುದನ್ನು ಸಚಿವಾಲಯವು ಗಮನಿಸಿದೆ. ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಐಟಿ ಕಾಯ್ದೆ ಅಥವಾ ನಿಯಮಗಳು-2021ರ ನಿಬಂಧನೆಗೆ ಒಳಪಟ್ಟಿದ್ದು, ನಿಯಮಗಳ ಪಾಲನೆ ಕಡ್ಡಾಯ' ಎಂದು ಅದು ಹೇಳಿದೆ.

ದೊಡ್ಡ ದೊಡ್ಡ ಸಂಸ್ಥೆಗಳು ಬಳಕೆದಾರರ ದೂರುಗಳ ಮೇಲೆ ಅವಲಂಬನೆಯಾಗುವ ಬದಲಾಗಿ, ಕಾನೂನುಬಾಹಿರ ಅಂಶಗಳ ತಡೆಗಾಗಿ ತಂತ್ರಜ್ಞಾನ ಆಧಾರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅದು ಸಲಹೆ ನೀಡಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries