ಕೋಝಿಕೋಡ್: ಸ್ಥಳೀಯಾಡಳಿತ ಸಂಸ್ಥೆ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ನಡೆದ ವಿಜಯೋತ್ಸವದ ಸಂದರ್ಭದಲ್ಲಿ ಚಂಗರೋತ್ ಪಂಚಾಯತ್ ಕಚೇರಿ ಮುಂದೆ ಸಗಣಿ ನೀರು ಎರಚಿದ ಘಟನೆಯ ಬಗ್ಗೆ ವಿವಾದ ಉಂಟಾಗುತ್ತಿದೆ.
ವಿಜಯೋತ್ಸವದ ಸಂದರ್ಭದಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರು ಚಂಗರೋತ್ ಪಂಚಾಯತ್ ಕಚೇರಿ ಮುಂದೆ ಸಗಣಿ ನೀರು ಎರಚಿದ್ದಾರೆ.
ಈ ಘಟನೆಯನ್ನು ಜಾತಿ ನಿಂದನೆ ಎಂದು ಬಣ್ಣಿಸಿ ಸಿಪಿಎಂ ಮುನ್ನೆಲೆಗೆ ಬಂದಿದೆ. ಕಳೆದ ಬಾರಿ ಎಲ್‍ಡಿಎಫ್ ಆಳ್ವಿಕೆ ನಡೆಸಿದ ಪಂಚಾಯತ್‍ನ ಅಧ್ಯಕ್ಷರು ಪರಿಶಿಷ್ಟ ಜಾತಿಯ ವ್ಯಕ್ತಿಯಾಗಿದ್ದರು. ಸ್ಥಳೀಯಾಡಳಿರತ ಸಂಸ್ಥೆ ಚುನಾವಣಾ ಫಲಿತಾಂಶ ಘೋಷಣೆಯ ದಿನದಂದು ಈ ಘಟನೆ ನಡೆದಿದೆ.
ವಿಜಯೋತ್ಸವಕ್ಕೆ ಬಂದ ಲೀಗ್ ಕಾರ್ಯಕರ್ತರು ಪಂಚಾಯತ್ ಕಚೇರಿ ಮುಂದೆ ಸಗಣಿ ನೀರು ಎರಚುತ್ತಿದ್ದರು ಮತ್ತು ಜನರನ್ನು ಪೆÇರಕೆಗಳಿಂದ ಹೊಡೆದರು. ಯೂತ್ ಲೀಗ್ ಪಂಚಾಯತ್ ಖಜಾಂಚಿ ಫೈಸಲ್ ನೇತೃತ್ವದಲ್ಲಿ ಸಗಣಿ ನೀರು ಎರಚಲಾಗಿದೆ ಎಂದು ಸಿಪಿಎಂ ಆರೋಪಿಸಿದೆ. ಘಟನೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಿಪಿಎಂ ತಿಳಿಸಿದೆ.

