ಕಾಸರಗೋಡು: ಶ್ರೀಸ್ಕಂದ ಯಕ್ಷಗಾನ ಕೇಂದ್ರ ಪಾಯಿಚ್ಚಾಲು ಕಾಸರಗೋಡಿನ ಚಿಣ್ಣರಿಂದ ಕಟೀಲು ಶ್ರೀದುರ್ಗಾಪರಮೇಶ್ವರಿ ಸನ್ನಿಧಿಯ ಸರಸ್ವತಿ ಸದನದಲ್ಲಿ ಷಣ್ಮಖ ವಿಜಯ ಎಂಬ ಯಕ್ಷಗಾನ ಜರಗಿತು.
ಕೇಂದ್ರದ ಹದಿನಾರು ಪುಟಾಣಿಗಳ ಪ್ರದರ್ಶನ ಜನಮನಗೆದ್ದಿತು. ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟ್ರಮಣ ಭಟ್, ಚೆಂಡೆಯಲ್ಲಿ ಅಂಬೆಮೂಲೆ ಶಿವಶಂಕರ ಭಟ್ ಹಾಗೂ ಮದ್ದಳೆಯಲ್ಲಿ ಲಕ್ಷ್ಮೀಶ ಬೇಂಗ್ರೋಡಿ, ವಸ್ತ್ರಾಲಂಕಾರದಲ್ಲಿ ಶ್ರೀದುರ್ಗಾಂಬ ಮಲ್ಲದ ರಾಕೇಶ್ ಗೋಳಿಯಡ್ಕ ಸಹಕರಿಸಿದರು. ನಾಟ್ಯಗುರು ರಂಜಿತ್ ಗೋಳಿಯಡ್ಕ ನೇತೃತ್ವ ವಹಿಸಿದ್ದರು. ಅರ್ಜುನ್ ಕೂಡ್ಲು, ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಅಧ್ಯಕ್ಷ ಕಿರಣ್ ಪ್ರಸಾದ್ ಕೂಡ್ಲು, ಕೋಶಾಧಿಕಾರಿ ಮುರಳೀಧರ ಶೆಟ್ಟಿ, ಕಾರ್ಯದರ್ಶಿ ಕಿರಣ್ ಪಾಯಿಚ್ಚಾಲು ಸಹಕರಿಸಿದರು. ಶ್ರೀಸ್ಕಂದ ಯಕ್ಷಗಾನ ಕೇಂದ್ರದ ಮಕ್ಕಳಿಗೆ ಆಸ್ರಣ್ಣರು ಪ್ರಸಾದ ವಿತರಿಸಿದರು.


