HEALTH TIPS

ಮಣಿಪುರ: ಎಂಟು ಉಗ್ರರ ಬಂಧನ

ಇಂಫಾಲ್‌: ನಿಷೇಧಿತ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ (ಕೆಸಿಪಿ) ವಿವಿಧ ಗುಂಪುಗಳಿಗೆ ಸೇರಿದ 8 ಮಂದಿ ಉಗ್ರರನ್ನು ಪೂರ್ವ ಇಂಫಾಲ್‌ ಹಾಗೂ ಪಶ್ಚಿಮ ಇಂಫಾಲ್‌ ಜಿಲ್ಲೆಗಳಲ್ಲಿ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. 

ಕೆಸಿಪಿಯ ಪೀಪಲ್ಸ್‌ ವಾರ್‌ ಗ್ರೂಪ್‌ನ ನಾಲ್ವರು ಉಗ್ರರನ್ನು ‍ಪೂರ್ವ ಇಂಫಾಲ್‌ನ ಆಯಂಡ್ರೊ ಲೀತಾನ್‌ಪೋಕ್ಪಿ ಎಂಬಲ್ಲಿ ಗುರುವಾರ ಬಂಧಿಸಲಾಗಿದೆ.

ಬಂಧಿತರಿಂದ ಒಂದು .32 ಪಿಸ್ತೂಲ್ ಹಾಗೂ ಒಂದು ಮ್ಯಾಗಜಿನ್‌, ಮೂರು .32 ಜೀವಂತ ಗುಂಡು ಮತ್ತು ಎರಡು ರೇಡಿಯೊ ಸೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೆಸಿಪಿಯ ಮತ್ತೊಂದು ಘಟಕ ತೈಬಾಂಗಾನ್ಬಾದ ಮೂವರು ಉಗ್ರರನ್ನು ಪಶ್ಚಿಮ ಇಂಫಾಲ್‌ನ ಲ್ಯಾಂಗೋಲ್ ಗ್ರಾಮದಲ್ಲಿ ಬಂಧಿಸಲಾಗಿದೆ. ಇದೇ ಗ್ರಾಮದಲ್ಲಿ ಕೆಸಿಪಿಯ ಇಬುಂಗೊ ಘಟಕದ ಒಬ್ಬ ಸದಸ್ಯನನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ಮಾಹಿತಿ ನೀಡಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries