ಕೊಚ್ಚಿ: ನಟಿಯ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಎರ್ನಾಕುಳಂ ಪ್ರಧಾನ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದ ನಂತರ, ಚಲನಚಿತ್ರ ತಾರೆಯರ ಸಂಘಟನೆ ‘ಅಮ್ಮ’ (AMMA) ಅಧಿಕೃತ ಪ್ರತಿಕ್ರಿಯೆ ನೀಡಿದೆ.
“ಕಾನೂನು ನ್ಯಾಯದ ಹಾದಿ ಹಿಡಿಯಲಿ. ‘ಅಮ್ಮ’ ನ್ಯಾಯಾಲಯವನ್ನು ಗೌರವಿಸುತ್ತದೆ,” ಎಂದು ಸಂಸ್ಥೆ ಫೇಸ್‌ಬುಕ್‌ನಲ್ಲಿ ತನ್ನ ನಿಲುವನ್ನು ಪೋಸ್ಟ್ ಮಾಡಿದೆ.ಏತನ್ಮಧ್ಯೆ, ರಮ್ಯಾ ನಂಬೀಶನ್, ರಿಮಾ ಕಲ್ಲಿಂಗಲ್ ಮತ್ತು ಪಾರ್ವತಿಯಂತಹ ತಾರೆಯರು ಫೇಸ್‌ಬುಕ್‌ನಲ್ಲಿ ‘ಅವಲ್ಕತ್’ ಎಂಬ ಶೀರ್ಷಿಕೆಯ ಪೋಸ್ಟರ್ ಅನ್ನು ಹಂಚಿಕೊಂಡರು ಮತ್ತು ಸಂತ್ರಸ್ತ್ಥೆ ನಟಿಗೆ ಬೆಂಬಲ ವ್ಯಕ್ತಪಡಿಸಿದರು. ನಟಿ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ನಟ ದಿಲೀಪ್ ಅವರನ್ನು ಎರ್ನಾಕುಳಂ ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತು. ಆದಾಗ್ಯೂ, ಮೊದಲ ಆರೋಪಿ ಪಲ್ಸರ್ ಸುನಿ ಸೇರಿದಂತೆ ಆರು ಆರೋಪಿಗಳನ್ನು ನ್ಯಾಯಾಲಯ ತಪ್ಪಿತಸ್ಥರೆಂದು ಘೋಷಿಸಿತು. ಡಿಸೆಂಬರ್ 12 ರಂದು ಅವರ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಲಾಗುವುದು.

