HEALTH TIPS

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್-ಸಿಪಿಎಂ-ಬಿಜೆಪಿ ಮೈತ್ರಿ!

ಕೊಚ್ಚಿ: ಕಾರ್ಪೊರೇಟ್ ಸಂಸ್ಥೆಯಾದ ಕೈಟೆಕ್ಸ್ ಗ್ರೂಪ್ ಸ್ಥಾಪಿಸಿದ ಟ್ವೆಂಟಿ20 ಪಕ್ಷದ ವಿಸ್ತಾರವನ್ನು ತಡೆಯಲು ಕೇರಳದ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಸಿಪಿಐ(ಎಂ) ಮತ್ತು ಬಿಜೆಪಿ ಒಂದೇ ತಂತ್ರವನ್ನು ಪಾಲಿಸುತ್ತಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಡಿಸೆಂಬರ್ 9 ಮತ್ತು 11ರಂದು ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಮೂರು ಪರಸ್ಪರ ವಿರೋಧಿ ಪಕ್ಷಗಳು ಒಂದೇ ವೇದಿಕೆಯಲ್ಲಿ ನಿಂತಿರುವುದು ಗಮನಾರ್ಹ ಬೆಳವಣಿಗೆ ಎಂದು Indian Express ವರದಿ ಮಾಡಿದೆ.

ಸಿಎಸ್‌ಆರ್ ಯೋಜನೆಯಿಂದ ರಾಜಕೀಯ ವೇದಿಕೆಗೆ ಕೈಟೆಕ್ಸ್ ಗ್ರೂಪ್ 2013ರಲ್ಲಿ ಕಿಳಕ್ಕಂಬಲಂ ಗ್ರಾಮದಲ್ಲಿ ಸಿಎಸ್‌ಆರ್ ಯೋಜನೆಯಾಗಿ ಟ್ವೆಂಟಿ20 ಅನ್ನು ಪ್ರಾರಂಭಿಸಿತು. ಆದರೆ ಕಾಂಗ್ರೆಸ್ ಆಡಳಿತದ ಪಂಚಾಯತ್ ಜೊತೆ ಪರವಾನಗಿ ವಿವಾದ ಉದ್ಭವಿಸಿದ ನಂತರ ಅದು ನೇರವಾಗಿ ರಾಜಕೀಯಕ್ಕೆ ಇಳಿಯಿತು. 2015ರಲ್ಲಿ ಕಿಳಕ್ಕಂಬಲಂ ಮತ್ತು 2020ರಲ್ಲಿ ಎರ್ನಾಕುಲಂ ಜಿಲ್ಲೆಯ ಇನ್ನೂ ಮೂರು ಪಂಚಾಯತ್‌ಗಳನ್ನು ಗೆದ್ದು ಟ್ವೆಂಟಿ20 ತನ್ನ ರಾಜಕೀಯ ನೆಲೆಯನ್ನು ಬಲಪಡಿಸಿತು. ಇದೀಗ ಪಕ್ಷ 48 ಪಂಚಾಯತ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಕೊಚ್ಚಿ ನಗರಸಭೆ ಮತ್ತು ಇತರ ಪ್ರಮುಖ ಸ್ಥಳೀಯ ಸಂಸ್ಥೆಗಳಲ್ಲಿಯೂ ಸ್ಪರ್ಧಿಸುತ್ತಿದೆ.

ಒಗ್ಗಟ್ಟಿನ ತಂತ್ರ : ಸ್ವತಂತ್ರರಿಗೆ ಬೆಂಬಲ

ಕಿಳಕ್ಕಂಬಲಂನ 21 ವಾರ್ಡ್‌ಗಳಲ್ಲಿ ಕಾಂಗ್ರೆಸ್, ಸಿಪಿಐ(ಎಂ) ಮತ್ತು ಬಿಜೆಪಿ ನೇರವಾಗಿ ಸ್ಪರ್ಧಿಸಿದ ಸ್ಥಾನಗಳ ಸಂಖ್ಯೆ ಕಡಿಮೆ. ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಿ, ಸಿಪಿಐ(ಎಂ) ಒಂದೇ ಸ್ಥಾನದಲ್ಲಿ ಹಾಗೂ ಬಿಜೆಪಿ ಎರಡು ಸ್ಥಾನಗಳಲ್ಲಿ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇತರ ವಾರ್ಡ್‌ಗಳಲ್ಲಿ ಮೂರೂ ಪ್ರಮುಖ ಪಕ್ಷಗಳೂ ಸಾಮಾನ್ಯ ಸ್ವತಂತ್ರ ಅಭ್ಯರ್ಥಿಗಳಿಗೆ ಬೆಂಬಲ ನೀಡಿವೆ. ಟ್ವೆಂಟಿ20 ಯ ಮಾವಿನಹಣ್ಣಿನ ಚಿಹ್ನೆಗೆ ಪ್ರತಿಯಾಗಿ, ವಿರೋಧ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು ಬೇರೆ ಹಣ್ಣುಗಳ ಚಿಹ್ನೆಗಳನ್ನು ಬಳಸಿರುವುದು ಈ ಬಾರಿ ಸ್ಥಳೀಯ ಚುನಾವಣೆಗಳ ವಿಶಿಷ್ಟವಾಇಇದೆ..

ಟ್ವೆಂಟಿ20 ಅಧ್ಯಕ್ಷ ಹಾಗೂ ಕೈಟೆಕ್ಸ್ ವ್ಯವಸ್ಥಾಪಕ ನಿರ್ದೇಶಕ ಸಾಬು ಎಂ. ಜಾಕೋಬ್ ತಮ್ಮ ಆಡಳಿತವನ್ನು ಸಮರ್ಥಿಸಿಕೊಂಡರು. ಟ್ವೆಂಟಿ20 ಆಡಳಿತದಲ್ಲಿರುವ ನಾಲ್ಕು ಪಂಚಾಯತ್‌ಗಳಲ್ಲಿ 50 ಕೋಟಿ ರೂಪಾಯಿಗಳ ಹೆಚ್ಚುವರಿ ನಿಧಿ ಇದೆ ಎಂದು ಅವರು ತಿಳಿಸಿದರು. ಸಾರ್ವಜನಿಕ ಕಾಮಗಾರಿಗಳಲ್ಲಿ ಸಾಮಾನ್ಯವಾಗಿ ರಾಜಕಾರಣಿಗಳ ಜೇಬಿಗೆ ಹೋಗುತ್ತಿದ್ದ ಹಣವನ್ನು ಸಂಪೂರ್ಣ ತಡೆಯುವಲ್ಲಿ ಪಕ್ಷವು ಯಶಸ್ವಿಯಾಗಿದೆ ಎಂದರು. ಫುಡ್ ಸೆಕ್ಯೂರಿಟಿ ಮಾರುಕಟ್ಟೆಯ ಮೂಲಕ 50 ಶೇಕಡಾ ಸಬ್ಸಿಡಿಯಲ್ಲಿ ಆಹಾರ ವಸ್ತುಗಳನ್ನು ನೀಡುತ್ತಿರುವ ಯೋಜನೆ ಜನಪ್ರಿಯತೆಯನ್ನು ಗಳಿಸಿದೆ. ಅಲ್ಲದೆ ವಿದ್ಯುತ್ ಮತ್ತು ಅಡುಗೆ ಅನಿಲದ ಬಿಲ್ಲುಗಳಲ್ಲಿ 25 ಶೇಕಡಾ ಸಬ್ಸಿಡಿ ನೀಡುವ ಹೊಸ ಯೋಜನೆಯನ್ನು ರಾಜ್ಯ ಸರ್ಕಾರ ತಿರಸ್ಕರಿಸಿದ್ದರಿಂದ ಹೈಕೋರ್ಟ್ ಮೊರೆ ಹೋಗಬೇಕಾಯಿತು ಎಂದು ಅವರು ಹೇಳಿದರು.

ಸಿಪಿಐ(ಎಂ) ಎರ್ನಾಕುಲಂ ಜಿಲ್ಲಾ ಕಾರ್ಯದರ್ಶಿ ಎಸ್. ಸತೀಶ್, ಟ್ವೆಂಟಿ20 ಸಿಎಸ್‌ಆರ್ ನಿಧಿಯನ್ನು ರಾಜಕೀಯ ಪ್ರಭಾವಕ್ಕೆ ಬಳಕೆ ಮಾಡುತ್ತಿದೆ ಎಂದು ಆರೋಪಿಸಿದರು. ಇದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಧಕ್ಕೆ ತಂದಿದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮುಹಮ್ಮದ್ ಶಿಯಾಸ್, ಜನರ ಆರ್ಥಿಕ ಸಂಕಷ್ಟವನ್ನು ಸಬ್ಸಿಡಿ ಮತ್ತು ಉಚಿತ ಕೊಡುಗೆಗಳ ಮೂಲಕ ರಾಜಕೀಯ ಲಾಭಕ್ಕೆ ಬಳಸಲಾಗುತ್ತಿದೆ ಎಂದು ಹೇಳಿದರು. ಸ್ಥಳೀಯ ಬಿಜೆಪಿ ನಾಯಕರು, ಮಹಿಳಾ ಮೀಸಲಾತಿ ಇರುವ ವಾರ್ಡ್‌ಗಳಲ್ಲಿ ಟ್ವೆಂಟಿ20 ಯ ಯೋಜನೆಗಳು ಮಹಿಳೆಯರ ಮತವನ್ನು ಆಕರ್ಷಿಸುತ್ತಿವೆ ಎಂದು ಹೇಳಿದರು.

ಸಿಎಸ್‌ಆರ್ ನಿಧಿ ದುರುಪಯೋಗದ ಆರೋಪಗಳನ್ನು ಸಾಬು ಜಾಕೋಬ್ ತಳ್ಳಿಹಾಕಿದರು. ಕೈಟೆಕ್ಸ್‌ನ ವಾರ್ಷಿಕ ಸಿಎಸ್‌ಆರ್ ನಿಧಿ ಕೇವಲ 2.5 ಕೋಟಿ ರೂಪಾಯಿ ಇದ್ದು, ಅದನ್ನು ಬಳಸುವ ಬಗ್ಗೆ ಕಠಿಣ ನಿಯಮಗಳಿವೆ ಎಂಬುದನ್ನು ಅವರು ಸ್ಪಷ್ಟಪಡಿಸಿದರು. ಕಳೆದ ಐದು ವರ್ಷಗಳಲ್ಲಿ 84 ಸರ್ಕಾರಿ ತಪಾಸಣೆಗಳು ನಡೆದಿದ್ದರೂ ಯಾವುದೇ ಅಕ್ರಮ ಪತ್ತೆಯಾಗಿಲ್ಲ ಎಂದು ತಿಳಿಸಿದರು. ಪ್ರಮುಖ ಪಕ್ಷಗಳು ಒಟ್ಟಾಗಿರುವುದು ಟ್ವೆಂಟಿ20 ಯ ಅಭಿವೃದ್ಧಿ ಮಾದರಿಯನ್ನು ಕಂಡು, ಅವರಿಗೆ ಭಯ ಆವರಿಸಿದೆ ಎಂದು ಅವರು ಹೇಳಿದರು.

ಟ್ವೆಂಟಿ20 ಯ ಉದಯ ಕೇರಳದ ಪಾರಂಪರಿಕ ರಾಜಕೀಯಕ್ಕೆ ಹೊಸ ಸವಾಲು ತಂದಿದ್ದು, ಅದನ್ನು ತಡೆಗಟ್ಟಲು ಪರಸ್ಪರ ವಿರೋಧಿ ಪಕ್ಷಗಳೂ ಒಂದಾಗಿರುವುದು ರಾಜ್ಯ ರಾಜಕೀಯಕ್ಕೆ ಹೊಸ ತಿರುವು ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries