HEALTH TIPS

ಮತದಾರರ ಅನರ್ಹತೆಯನ್ನು ಸಾಬೀತುಪಡಿಸುವ ಜವಾಬ್ದಾರಿ ರಾಜ್ಯಗಳ ಮೇಲಿದೆ: ಸುಪ್ರೀಂ ಕೋರ್ಟ್‌

ನವದೆಹಲಿ: ದೇಶದಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆಯ ಸಾಂವಿಧಾನಿಕತೆ ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ಮುಂದುವರಿಯಿತು. ಹಿರಿಯ ವಕೀಲ ಶಾದನ್ ಫರಾಸತ್ ಅವರು, ಅಸ್ತಿತ್ವದಲ್ಲಿರುವ ಮತದಾರರ ಅನರ್ಹತೆಯನ್ನು ಸಾಬೀತುಪಡಿಸುವ ಜವಾಬ್ದಾರಿ ರಾಜ್ಯಗಳದ್ದೇ ಹೊರತು ಚುನಾವಣಾ ಆಯೋಗದದ್ದಲ್ಲ ಎಂದು ವಾದಿಸಿದರು.

ಮತದಾರರ ಪೌರತ್ವವನ್ನು ಪರಿಶೀಲಿಸಲು ಚುನಾವಣಾ ಆಯೋಗಕ್ಕೆ ಯಾವುದೇ ಸ್ಪಷ್ಟ ಅಥವಾ ಅಡಗಿರುವ ಅಧಿಕಾರವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇದೇ ವೇಳೆ, ತಮಿಳುನಾಡು ಸರ್ಕಾರವು ಶಬರಿಮಲೆ ಯಾತ್ರೆ ಹಿನ್ನಲೆಯಲ್ಲಿ ಮತದಾರರ ನೋಂದಣಿ ಫಾರ್ಮು ಸಲ್ಲಿಕೆ ಅವಧಿಯನ್ನು ವಿಸ್ತರಿಸಲು ಮನವಿ ಮಾಡಿತು. ಅಸ್ಸಾಂ ರಾಜ್ಯದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ನಡೆಸದಿರುವುದನ್ನು ಪ್ರಶ್ನಿಸಿರುವ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ಪರಿಶೀಲಿಸಿತು.

1997ರಲ್ಲಿ ರಾಜ್ಯದಲ್ಲಿ 40-50 ಲಕ್ಷ ಅಕ್ರಮ ವಲಸಿಗರಿದ್ದಾರೆ ಎನ್ನುವ ಆರೋಪಗಳಿದ್ದರೂ, ಚುನಾವಣಾ ಆಯೋಗವು ಅಸ್ಸಾಂನಲ್ಲಿ ವಿಶೇಷ ಪರಿಷ್ಕರಣೆ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಆಯೋಗದಿಂದ ಸ್ಪಷ್ಠೀಕರಣ ಕೋರಲಾಗಿದ್ದು, ಅಸ್ಸಾಂನ ವಿಶೇಷ ಪರಿಸ್ಥಿತಿಗೆ ಅನ್ವಯಿಸುವ ಕಾನೂನುಗಳನ್ನೂ ನ್ಯಾಯಾಲಯ ಗಮನಕ್ಕೆ ತಂತು.

ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಭಾಗವಾಗಿ ನಕಲಿ ಮತದಾರರನ್ನು ಗುರುತಿಸಲು ಚುನಾವಣಾ ಆಯೋಗವು ಹೊಸ ತಂತ್ರಾಂಶವನ್ನು ಜಾರಿಗೆ ತಂದಿದೆ. ಬೂತ್‌ ಮಟ್ಟದ ಅಧಿಕಾರಿಗಳ ಅಪ್ಲಿಕೇಶನ್‌ಗೆ ಸೇರಿಸಲಾದ ಈ ವೈಶಿಷ್ಟ್ಯದಲ್ಲಿ 56 ಲಕ್ಷಕ್ಕೂ ಹೆಚ್ಚು ಪತ್ತೆಯಾಗದ ಹಾಗೂ ಸ್ಥಳಾಂತರಗೊಂಡ ಮತದಾರರ ವಿವರಗಳು ಬಹಿರಂಗಗೊಂಡಿವೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಪರಿಷ್ಕರಣೆಯನ್ನು ಮೇಲ್ವಿಚಾರಣೆ ಮಾಡಲು ಐದು ಹೊಸ ಚುನಾವಣಾ ವೀಕ್ಷಕರನ್ನೂ ನಿಯೋಜಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries