ಕಾಸರಗೋಡು: ಜಿಲ್ಲಾ ಪಂಚಾಯಿತಿ ಬೇಕಲ ಮತ್ತು ಪುತ್ತಿಗೆ ಡಿವಿಶನ್ ಜಿಲ್ಲಾ ಪಂಚಾಯತ್ ವಿಭಾಗಗಳಲ್ಲಿ ಮರು ಎಣಿಕೆಗೆ ಆದೇಶಿಸಲಾಗಿದೆ. ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರಿಗೆ ಲಭಿಸಿದ ದೂರಿನನ್ವಯ ಈ ಆದೇಶ ನೀಡಲಾಗಿದೆ. ಡಿಸೆಂಬರ್ 15 ರಂದು ಬೆಳಿಗ್ಗೆ 8ಕ್ಕೆ ಮರು ಮತ ಎಣಿಕೆ ಕಾರ್ಯ ಆಯಾ ಕೇಂದ್ರಗಳಲ್ಲಿ ನಡೆಯಲಿದೆ.
ಪ್ರಸಕ್ತ ಕಾಸರಗೋಡು ಜಿಲ್ಲಾ ಪಂಚಾಯಿತಿಯಲ್ಲಿ ಐಕ್ಯರಂಗ ಏಳು, ಎಡರಂಗ ಎಂಟು ಹಾಗೂ ಎನ್‍ಡಿಎ ಒಕ್ಕೂಟ ಒಂದು ಡಿವಿಶನ್‍ನಲ್ಲಿ ಗೆಲುವು ಸಾಧಿಸಿದೆ.

