ಕಾಸರಗೋಡು: ನಗರದ ಶ್ರೀ ಧರ್ಮ ಶಾಸ್ತಾ ಸೇವಾ ಸಂಘದ ವತಿಯಿಂದ ಡಿಸಂಬರ್ ತಿಂಗಳ 11 ರಿಂದ 14 ವರೆಗೆ ಜರಗಲಿರುವ 60 ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ದೀಪೋತ್ಸವದ ಚಪ್ಪರ ಮುಹೂರ್ತ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದಲ್ಲಿ ಜರುಗಿತು.
ದೇವಸ್ಥಾನದ ಪ್ರಧಾನ ಅರ್ಚಕ ಶಿವಶಂಕರ ಅಡಿಗ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮ ಜರಗಿತು. ಸಮಿತಿ ಕಾರ್ಯಾಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ, ಉಪಾಧ್ಯಕ್ಷ ಸುರೇಶ್ ಸುವರ್ಣ, ಕಾರ್ಯದರ್ಶಿ ಮಹೇಶ ನೆಲ್ಲಿಕುಂಜೆ, ಚಪ್ಪರ ಸಮಿತಿ ಅಧ್ಯಕ್ಷ ಸುನೀಶ್, ಸದಸ್ಯರಾದ ವಿಶ್ವನಾಥ ಕೋಟಿ, ಸದಾನಂದ, ವಿಘ್ನೇಶ, ಕೆ.ಪಿ. ರಮೇಶ ಹಾಗೂ ಭಗವದ್ಭಕ್ತರು ಉಪಸ್ಥಿತರಿದ್ದರು.





