HEALTH TIPS

ಕಾಸರಗೋಡು ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಸಂಪನ್ನ

ಕಾಸರಗೋಡು: ನಗರದ ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಆಶ್ರಯದಲ್ಲಿ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ವಠಾರದ ಶ್ರೀಧರ್ಮಶಾಸ್ತಾ ಮಂದಿರದಲ್ಲಿ  60ನೇ ವರ್ಷದ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಸಂಭ್ರಮದಿಂದ ಸಂಪನ್ನಗೊಂಡಿತು.

ಶನಿವಾರ  ಗಣಪತಿ ಹೋಮ, ಸಹಸ್ರನಾಮಾರ್ಚನೆ, ಭಜನಾ ಸಂಕೀರ್ತನೆ, ಸಂಜೆ ಪಾಲೆಕೊಂಬು ಮೆರವಣಿಗೆ ನಡೆಯಿತು.  ಕಾಸರಗೋಡು ಅಶೋಕನಗರ ಶ್ರೀ ಅಯ್ಯಪ್ಪ ಭಜನಾಮಂದಿರದಿಂದ ಆರಂಭಗೊಂಡ  ಮೆರವಣಿಗೆ ಹೊಸ ಬಸ್ ನಿಲ್ದಾಣ ವೃತ್ತ, ಅಶ್ವಿನಿನಗರ, ಶಿವಾಜಿನಗರ, ಕರಂದಕ್ಕಾಡು ಜಂಕ್ಷನ್, ಬ್ಯಾಂಕ್ ರಸ್ತೆ, ಮಠದ ಪೇಟೆ, , ನಾಗರಾಜಕಟ್ಟೆ ಹಾದಿಯಾಗಿ ಶ್ರೀಮಲ್ಲಿಕಾರ್ಜುನ ದೇವಸ್ಥಾನ ಮುಂಭಾಗದ ಸಭಾಂಗಣಕ್ಕೆ ತಲುಪಿತು.  ರಾತ್ರಿ  ಶ್ರೀ ಅಯ್ಯಪ್ಪನ್ ಗೀತೆ, ಬೇಟೆವಿಳಿ, ಪಾಲ್ಕಿಂಡಿ ಮೆರವಣಿಗೆ, ಕೆಂಡಸೇವೆ, ಭಾನುವಾರ ಬೆಳಗ್ಗೆ ಶ್ರೀ ಅಯ್ಯಪ್ಪ-ವಾವರನ್ ಯುದ್ಧದೊಂದಿಗೆ ಶ್ರೀಅಯ್ಯಪ್ಪನ್ ತಿರುವಿಳಕ್ಕ್‍ಮಹೋತ್ಸವ ಸಂಪನ್ನಗೊಂಡಿತು.   

ಗುರುವಾರ ಶ್ರೀಧರ್ಮಶಾಸ್ತಾ ಮಂದಿರದ ರಜತ ಛಾಯಾಚಿತ್ರ ಫಲಕ ಪ್ರತಿಷ್ಠಾ ಪ್ರಥಮ ದಿನಾಚರಣೆಯೊಂದಿಗೆ ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ಆರಂಭಗೊಂಡಿದ್ದು, ನಾಲ್ಕು ದಿವಸಗಳ ಕಾಲ ನಿರಂತರ ಕಾರ್ಯಕ್ರಮಗಳೊಮದಿಗೆ ನೆರವೇರಿತು.  



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries