ಬದಿಯಡ್ಕ: ಬದಿಯಡ್ಕ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಹಾಗೂ ಯುಡಿಎಫ್ ಸಮಬಲ ಸಾಸಿದೆ. ಒಟ್ಟು 21 ವಾರ್ಡುಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 10 ಸ್ಥಾನ, ಐಕ್ಯರಂಗ 10 ಸ್ಥಾನ ಹಾಗೂ ಉಳಿದ ಒಂದು ಸ್ಥಾನದಲ್ಲಿ ಎಡರಂಗ ಗೆಲುವನ್ನು ಕಂಡಿದೆ. ಸಮಬಲ ಸಾಸಿದ ಹಿನ್ನೆಲೆಯಲ್ಲಿ ಆಡಳಿತ ಯಾರಿಗೆ ಎಂಬ ಕುತೂಹಲವು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಬಿಜೆಪಿ ವಿಜಯೋತ್ಸವ :
ಬಿಜೆಪಿ ಪಕ್ಷದಿಂದ ಗೆದ್ದುಬಂದ 10 ಮಂದಿ ಅಭ್ಯರ್ಥಿಗಳು, ಬ್ಲಾಕ್ ನೀರ್ಚಾಲು ಡಿವಿಶನ್‍ನಲ್ಲಿ ಗೆದ್ದ ಮಹೇಶ್ ವಳಕ್ಕುಂಜ, ಹಾಗೂ ಜಿಲ್ಲಾ ಪಂಚಾಯತಿ ಬದಿಯಡ್ಕ ಡಿವಿಶನ್‍ನಲ್ಲಿ ಗೆದ್ದ ರಾಮಪ್ಪ ಮಂಜೇಶ್ವರ ಕಾರ್ಯಕರ್ತರೊಂದಿಗೆ ವಿಜಯೋತ್ಸವದಲ್ಲಿ ಪಾಲ್ಗೊಂಡರು. ಬದಿಯಡ್ಕ ಪೇಟೆಯಲ್ಲಿ ಜರಗಿದ ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.

.jpg)
