ತಿರುವನಂತಪುರಂ: ರಾಹುಲ್ ಈಶ್ವರ್ ಸೋಮವಾರದವರೆಗೆ ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಲಿದ್ದಾರೆ. ಕಸ್ಟಡಿ ಅವಧಿ ಮುಗಿದ ನಂತರ ರಾಹುಲ್ ಅವರನ್ನು ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಹಾಜರುಪಡಿಸಿದ ನಂತರ ಅವರನ್ನು ಮತ್ತೆ ವಶಕ್ಕೆ ಪಡೆಯಲಾಯಿತು.
ಪೋಲೀಸರು ವರದಿ ಸಲ್ಲಿಸದ ಕಾರಣ ರಾಹುಲ್ ಅವರನ್ನು ಮತ್ತೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ರಾಹುಲ್ ಅವರನ್ನು ಪೂಜಾಪುರ ಜೈಲಿಗೆ ಕರೆದೊಯ್ಯಲಾಯಿತು. ಜಾಮೀನು ಅರ್ಜಿಯ ಪರಿಗಣನೆಯನ್ನು ಸೋಮವಾರಕ್ಕೆ ಮುಂದೂಡಲಾಗಿದೆ. ಇದಕ್ಕೂ ಮೊದಲು, ತಿರುವನಂತಪುರಂ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ರಾಹುಲ್ ಅವರ ಜಾಮೀನು ಅರ್ಜಿಯನ್ನು ಎರಡು ಬಾರಿ ತಿರಸ್ಕರಿಸಿತ್ತು. ಸಂತ್ರಸ್ಥೆ ವಿರುದ್ಧ ಸರಣಿ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ನವೆಂಬರ್ 30 ರಂದು ರಾಹುಲ್ ಈಶ್ವರ್ ಅವರನ್ನು ಪೆÇಲೀಸರು ಬಂಧಿಸಿದ್ದರು.
ಆರೋಪಿ ತನಿಖೆಗೆ ಸಹಕರಿಸದಿರುವುದು, ವಿಡಿಯೋ ಚಿತ್ರೀಕರಿಸಿದ ಮೊಬೈಲ್ ಪೋನ್ ಮತ್ತು ಪಾಸ್‍ವರ್ಡ್ ನೀಡದ ಕಾರಣ ಲ್ಯಾಪ್‍ಟಾಪ್ ಪರಿಶೀಲಿಸಲು ಸಾಧ್ಯವಾಗದಿರುವುದು ಮುಂತಾದ ಕಾರಣಗಳನ್ನು ಉಲ್ಲೇಖಿಸಿ ಪೆÇಲೀಸರು ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡು ಪ್ರಶ್ನಿಸಲು ಎರಡು ದಿನಗಳ ಕಾಲಾವಕಾಶ ಕೇಳಿದ್ದರು. ಆದಾಗ್ಯೂ, ಕಸ್ಟಡಿಯಲ್ಲಿ ವಿಚಾರಣೆ ನಡೆಸಲು ನ್ಯಾಯಾಲಯ ಕೇವಲ ಒಂದು ದಿನ ಮಾತ್ರ ಅವಕಾಶ ನೀಡಿತು. ಈ ಗಡುವು ಇಂದು ಬೆಳಿಗ್ಗೆ 11 ಗಂಟೆಗೆ ಮುಕ್ತಾಯವಾಯಿತು.



