ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಕಾಞಂಗಾಡ್ ಹೊಸದುರ್ಗದಿಂದ ಉತ್ತರ ಕೊಟ್ಟಚೇರಿಯವರೆಗೆ ಪೊಲೀಸರ ಪಥಸಂಚಲನ ನಡೆಯಿತು. ಚುನಾವಣೆ ಸಂದರ್ಭ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಥಸಂಚಲನ ಆಯೋಜಿಸಲಾಗಿತ್ತು.
ಕಣ್ಣೂರು ರೇಂಜ್ ಡಿಐಜಿ ಯತೀಶ್ ಚಂದ್ರಜಿ.ಹೆಚ್, ಐಪಿಎಸ್, ಕಾಸರಗೋಡು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಬಿ.ವಿ.ವಿಜಯ ಭರತ್ ರೆಡ್ಡಿ ಐಪಿಎಸ್ ರೂಟ್ ಮಾರ್ಚ್ ಗೆ ಚಾಲನೆ ನೀಡಿದರು. ಕಾಸರಗೋಡು ಎಎಸ್ಪಿ ಡಾ.ನಂದಗೋಪನ್ ಎಂ ಐಪಿಎಸ್, ಕಾಞಂಗಾಡು ಡಿವೈಎಸ್ಪಿ ಸುರೇಶ್ ಬಾಬು, ಹೊಸದುರ್ಗ ಇನ್ಸ್‍ಪೆಕ್ಟರ್ ಅನೂಪ್ ಕುಮಾರ್ ಇ, ಚಂದೇರ ಠಾಣೆ ಇನ್ಸ್‍ಪೆಕ್ಟರ್ ಪ್ರಶಾಂತ್ ಎಂ, ನೀಲೇಶ್ವರ ಠಾನೆ ಇನ್ಸ್‍ಪೆಕ್ಟರ್ ನಿಬಿನ್ ಜಾಯ್ ಮತ್ತು ಜಿಲ್ಲೆಯ ಇತರ ಪೆÇಲೀಸ್ ಅಧಿಕಾರಿಗಳು, ಕೇರಳ ಸಶಸ್ತ್ರ ಪೆÇಲೀಸ್ ಪಡೆಯ 4 ನೇ ಬೆಟಾಲಿಯನ್ ಪೆÇಲೀಸ್ ಅಧಿಕಾರಿಗಳು ಸೇರಿದಂತೆ 120 ಮಂದಿ ಪೆÇಲೀಸ್ ಅಧಿಕಾರಿಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದರು.



