ನವದೆಹಲಿ: ಕಾಂಬೋಡಿಯಾ ಗಡಿಯಲ್ಲಿ ಹಿಂದೂ ಧರ್ಮದ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಿರುವುದಕ್ಕೆ ಭಾರತ ತೀವ್ರ ಖಂಡನೆ ವ್ಯಕ್ತಪಡಿಸಿದೆ.
ಕಾಂಬೋಡಿಯಾ ಗಡಿಯಲ್ಲಿ ನಿರ್ಮಾಣ ಮಾಡಲಾಗಿದ್ದ 30 ಅಡಿ ಎತ್ತರದ ವಿಷ್ಣ ಪ್ರತಿಮೆಯನ್ನು ಧ್ವಂಸ ಮಾಡಿದ ಬಗ್ಗೆ ವರದಿಗಳನ್ನು ನಾವು ನೋಡಿದ್ದೇವೆ.
ಈ ಘಟನೆ ಜಗತ್ತಿನಾದ್ಯಂತ ಇರುವ ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದು ಇಂತಹ ಘಟನೆ ನಡೆಯಬಾರದಿತ್ತು ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಶಾಂತಿ ಕಾಪಾಡಲು ಹಾಗೂ ಪ್ರಾಣಹಾನಿ ಮತ್ತು ಆಸ್ತಿ-ಪಾಸ್ತಿ ನಷ್ಟವನ್ನು ತಡೆಯಲು, ಎರಡೂ ರಾಷ್ಟ್ರಗಳು ಸಂವಾದ ಮತ್ತು ರಾಜತಾಂತ್ರಿಕ ಮಾರ್ಗವನ್ನು ಅನುಸರಿಸಬೇಕು ಎಂದು ಭಾರತ ಮನವಿ ಮಾಡಿದೆ.
ಕಾಂಬೋಡಿಯಾ ಗಡಿಯಲ್ಲಿ ಎರಡು ದಿನಗಳ ಹಿಂದೆ ವಿಷ್ಣು ಪ್ರತಿಮೆಯನ್ನು ಧ್ವಂಸ ಮಾಡಲಾಗಿದೆ. ಇದನ್ನು ಥಾಯ್ಲೆಂಡ್ ಸೇನೆ ಧ್ವಂಸ ಮಾಡಿದೆ ಎಂದು ಕಾಂಬೋಡಿಯಾ ಆರೋಪ ಮಾಡಿದೆ.

