ಕಾಸರಗೋಡು: ಮನೆ ಕೊಠಡಿಯೊಳಗೆ ವಿದ್ಯಾರ್ಥಿಯೊಬ್ಬನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಸರಗೋಡಿನಲ್ಲಿ ಐಟಿಐ ವಿದ್ಯಾರ್ಥಿಯಾಗಿರುವ, ಬಂದ್ಯೋಡು ಅಡ್ಕ ಬೈದಳ ನಿವಾಸಿ, ಪ್ರಸಕ್ತ ಮಂಗಲ್ಪಾಡಿ ಚೆರುಗೋಳಿಯ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿರುವ ಮಹಮ್ಮದ್ ಪಾಷ ಎಂಬವರ ಪುತ್ರ ಶಿಹಾಬ್(19)ಮೃತಪಟ್ಟ ವಿದ್ಯಾರ್ಥಿ.
ಮಂಗಳವಾರ ರಾತ್ರಿ ಆಹಾರ ಸೇವಿಸಿ ಕೊಠಡಿಯೊಳಗೆ ಮಲಗಲು ತೆರಳಿದ್ದ ಶಿಹಾಬ್ ಬೆಳಗ್ಗೆ ಬಾಗಿಲು ತೆರೆಯದಿರುವುದರಿಂದ ಕೊಠಡಿ ಬಳಿ ತೆರಳಿ ನೋಡಿದಾಗ ಒಳಗಿಂದ ಚಿಲಕಭದ್ರಪಡಿಸಿ ಕಿಟಿಕಿ ಸರಳಿಗೆ ನೇಣಿನಲ್ಲಿ ನೇತಾಡುತ್ತಿರುವುದು ಕಂಡುಬಂದಿತ್ತು. ಆಸುಪಾಸಿನವರು ಆಗಮಿಸಿ ಶಿಹಾಬ್‍ನನ್ನು ನೇಣಿನಿಂದ ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.


