ಕಾಸರಗೋಡು: ವಂದೇ ಭಾರತ್ ರೈಲಿನಲ್ಲಿ 5.6ಗ್ರಾಂ. ಉಪೇಕ್ಷಿತ ಸ್ಥಿತಿಯಲ್ಲಿ ಚಿನ್ನಾಭರಣ ಪತ್ತೆಯಾಗಿದ್ದು, ಇದನ್ನು ಕಾಸರಗೋಡು ರೈಲ್ವೇ ಪೆÇಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ. ಡಿ. 7ರಂದು ತಿರುವನಂತಪುರ-ಕಾಸರಗೋಡು ಮಧ್ಯೆ ಸಂಚರಿಸುವ ರೈಲಿನಲ್ಲಿ ಚಿನ್ನಾಭರಣ ಪತ್ತೆಯಾಗಿದೆ.
ರೈಲಿನ ಕ್ಯಾಟರಿಂಗ್ ವಿಭಾಗದವರು ಚಿನ್ನ ಪತ್ತೆಹಚ್ಚಿ, ಇದನ್ನು ರೈಲ್ವೆ ಪೆÇಲೀಸರಿಗೆ ಹಸ್ತಾಂತರಿಸಿದ್ದರು. ಚಿನ್ನಾಭರಣ ಕಳೆದುಕೊಂಡವರು ಅದರ ಸಾಕ್ಷ್ಯ ಸಹಿತ ಹಾಜರಾಗಿ ಮರಳಿ ಪಡೆಯಬಹುದು ಎಂದು ಪೆÇಲೀಸರು ತಿಳಿಸಿದ್ದಾರೆ. ತಪ್ಪಿದಲ್ಲಿ ಮುಂದಿನ ಕ್ರಮದ ಅಂಗವಾಗಿ ಚಿನ್ನಾಭರಣವನ್ನು ಕಾಸರಗೋಡು ರೆವೆನ್ಯೂ ಡಿವಿಷನಲ್ ಆಫೀಸಿಗೆ ಒಪ್ಪಿಸುವುದಾಗಿ ಪೆÇಲೀಸರು ತಿಳಿಸಿದ್ದಾರೆ. ಈ ಸಂಬಂಧ ಮಾಹಿತಿಗೆ 9778639164, 94994 223030 ಎಂಬ ನಂಬರ್ ಅಥವಾ ರೈಲ್ವೆ ಪೆÇಲೀಸ್ ಎಸ್. ಎಚ್. ಒ -9497981124 ಅವರ ಸಂಖ್ಯೆಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

