ಭುವನೇಶ್ವರ: ಕೇರಳದ ಸಾರ್ವಜನಿಕ ಶಿಕ್ಷಣ ಇಲಾಖೆಯ ತಾಂತ್ರಿಕ ವಿಭಾಗವಾದ ಕೇರಳ ಮೂಲಸೌಕರ್ಯ ಮತ್ತು ಶಿಕ್ಷಣಕ್ಕಾಗಿ ತಂತ್ರಜ್ಞಾನ (ಕೈಟ್), ಒಡಿಶಾದ ಭುವನೇಶ್ವರದಲ್ಲಿ ನಡೆದ 19 ನೇ ಡಿಜಿಟಲ್ ಟ್ರಾನ್ಸ್‍ಫರ್ಮೇಷನ್ ಕಾನ್ಕ್ಲೇವ್‍ನಲ್ಲಿ 'ಶಿಕ್ಷಣ ತಂತ್ರಜ್ಞಾನ ಪರಿವರ್ತನೆ ಪ್ರಶಸ್ತಿ'ಯನ್ನು ಪಡೆದುಕೊಂಡಿದೆ.
ಕೇರಳದ ಶಾಲೆಗಳಿಗಾಗಿ ಕೈಟ್ ಅಭಿವೃದ್ಧಿಪಡಿಸಿದ ಕೃತಕ ಬುದ್ಧಿಮತ್ತೆ ಆಧಾರಿತ 'ಸಮಗ್ರ ಪ್ಲಸ್ ಎಐ' ಕಲಿಕಾ ವೇದಿಕೆಗೆ ಈ ರಾಷ್ಟ್ರೀಯ ಮನ್ನಣೆ ಲಭಿಸಿದೆ.
ಡಿಸೆಂಬರ್ 5 ರಂದು ಭುವನೇಶ್ವರದಲ್ಲಿ ನಡೆದ ಸಮಾರಂಭದಲ್ಲಿ ಸಂಘಟಕರು ಕೈಟ್ ಸಿಇಒ ಕೆ. ಅನ್ವರ್ ಸಾದತ್‍ಗೆ ಪ್ರಶಸ್ತಿಯ ಬಗ್ಗೆ ತಿಳಿಸಿದರು.
'ಸಮಗ್ರ ಪ್ಲಸ್' ಎಂಬುದು ಮಕ್ಕಳ ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ ಅವರ ಕಲಿಕೆಯನ್ನು ಹೊಂದಿಸಲು ಸಹಾಯ ಮಾಡುವ ಎಐ ವೇದಿಕೆಯಾಗಿದೆ.
ಇದಕ್ಕಾಗಿ, ಚಾಟ್ ಬಾಟ್ ವ್ಯವಸ್ಥೆ, ರಸಪ್ರಶ್ನೆಗಳು, ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ ವಿವಿಧ ಆಟಗಳು, ಭಾಷಣ ಸಹಾಯಕ ಮತ್ತು ಮೌಲ್ಯಮಾಪನ ವ್ಯವಸ್ಥೆಗಳಂತಹ ಮಾಡ್ಯೂಲ್‍ಗಳನ್ನು ಸೇರಿಸಲಾಗಿದೆ.
ಕೈಟ್ 'ಸವÀ್ಗ್ರ ಪ್ಲÉ್ಗ್ರಐ' ವೇದಿಕೆಯನ್ನು ಕೃತಕ ಬುದ್ಧಿಮತ್ತೆ ಅಲ್ಗಾರಿದಮ್ ಗೊಂದಲಗಳಿಲ್ಲದೆ ಸಂಪೂರ್ಣವಾಗಿ ಪಠ್ಯಕ್ರಮದ ಚೌಕಟ್ಟಿನೊಳಗೆ ಅಭಿವೃದ್ಧಿಪಡಿಸಲಾಗಿದೆ.




