ಕಾಸರಗೋಡು: ಜಿಲ್ಲೆಯ ವಿವಿಧ ಕ್ರೈಸ್ತ ದೇವಾಲಯಗಳಲ್ಲಿ ಕ್ರೈಸ್ತ ಬಾಂಧವರು ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮ, ಸಡಗರದಿಂದ ಗುರುವಾರ ಆಚರಿಸಿದರು. ಕಳೆದ ಇಪ್ಪತ್ತೈದು ದಿವಸಗಳಿಂದ ವ್ರತಾನುಷ್ಠಾನ, ದಾನಧರ್ಮಾದಿಗಳ ನಂತರ ಇಗರ್ಜಿಗಳಲ್ಲಿ ವಿಶೇಷ ಪ್ರಾರ್ಥನೆ, ದಿವ್ಯ ಬಲಿಪೂಜೆ ನೆರವೇರಿತು. ನಾನಾ ಕಡೆ ಗೋದಲಿಗಳ ನಿರ್ಮಾಣ ಗಮನ ಸೆಳೆದಿತ್ತು. ಕಾಸರಗೋಡು ರೈಲ್ವೆ ನಿಲ್ದಾಣ ರಸತೆಯ ಶೋಕಮಾತಾ ಇಗರ್ಜಿ, ಕಾಸರಗೋಡು ಕೋಟೆಕಣಿ ಸೈಂಟ್ ಜೋಸೆಫ್ ಇಗರ್ಜಿ, ಉಕ್ಕಿನಡ್ಕದ ಏಸುವಿನ ಪವಿತ್ರ ಹೃದಯ ಇಗರ್ಜಿ, ಕಯ್ಯಾರು ಕ್ರಿಸ್ತ ರಾಜ ಇಗರ್ಜಿ, ಬೇಳ ಶೋಕಮಾತಾ ಇಗರ್ಜಿ, ಕುಂಬಳೆ ಸೈಂಟ್ ಮೋನಿಕಾ ಇಗರ್ಜಿ ಸೇರಿದಂತೆ ವಿವಿಧೆಡೆ ಕ್ರಿಸ್‍ಮಸ್ ಹಬ್ಬವನ್ನು ಆಚರಿಸಲಾಯಿತು.
ಚಿತ್ರ: ಕಾಸರಗೋಡು ಕೋಟೆಕಣಿ ಸೈಂಟ್ ಜೋಸೆಫ್ ಇಗರ್ಜಿ ವಠಾರದಲ್ಲಿ ನಿರ್ಮಿಸಲಾದ ಗೋದಲಿಯಲ್ಲಿ ಧರ್ಮಗುರು, ವಂದನೀಯ ಫಾದರ್ ಜಾರ್ಜ್ ವಳ್ಳಿಮಲ ಅವರ ನೇತೃತ್ವದಲ್ಲಿ ಗೋದಲ ಪೂಜೆ ನಡೆಯಿತು.

