ನವದೆಹಲಿ: ಪ್ರವಾಹದಲ್ಲಿ ತತ್ತರಿಸಿರುವ ಶ್ರೀಲಂಕಾಕ್ಕೆ ನೆರವು ನೀಡಲು 'ಆಪರೇಷನ್ ಸಾಗರ ಬಂಧು' ಕಾರ್ಯಾಚರಣೆಯ ಭಾಗವಾಗಿ, ನೆರವಿನ ಸಾಮಗ್ರಿ ಹೊತ್ತ ಸಿ-130ಜೆ ವಿಮಾನವನ್ನು ಭಾರತೀಯ ವಾಯುಪಡೆಯು ಶ್ರೀಲಂಕಾಕ್ಕೆ ಕಳುಹಿಸಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದರು.
ತ್ವರಿತ ಪರಿಹಾರ ಕಾರ್ಯಾಚರಣೆಗಾಗಿ ಶ್ರೀಲಂಕಾ ರಾಜಧಾನಿಯಲ್ಲಿ ಎಂಐ 17 ಹೆಲಿಕಾಪ್ಟರ್‌ಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಅವರು ಹೇಳಿದರು.
'ಕೊಲಂಬೊದಲ್ಲಿ ನಿಯೋಜಿತವಾಗಿರುವ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪಡೆ (ಎನ್‌ಡಿಆರ್‌ಎಫ್) ತಂಡಕ್ಕೆ ಅಗತ್ಯವಿರುವ ಸಾಧನಗಳನ್ನು ಹೊತ್ತೊಯ್ದ ವಿಮಾನವು ಭಾನುವಾರ ಅಲ್ಲಿಗೆ ತಲುಪಿದೆ' ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಅತಂತ್ರರಾಗಿರುವ ಭಾರತೀಯರನ್ನು ಈ ವಿಮಾನದ ಮೂಲಕ ವಾಪಸ್ ಕರೆತರಲಾಗುತ್ತದೆ ಎಂದರು.




