HEALTH TIPS

H-1ಬಿ ವೀಸಾಗೆ 1 ಲಕ್ಷ ಡಾಲರ್ ಶುಲ್ಕ: ಟ್ರಂಪ್ ಆದೇಶ ಎತ್ತಿ ಹಿಡಿದ ನ್ಯಾಯಾಲಯ

 ವಾಷಿಂಗ್ಟನ್‌: ಎಚ್‌-1ಬಿ ವೀಸಾಕ್ಕಾಗಿ 1ಲಕ್ಷ ಡಾಲರ್ ಶುಲ್ಕ ಪಾವತಿಸಬೇಕು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೊರಡಿಸಿದ್ದ ಆದೇಶವನ್ನು ಫೆಡರಲ್‌ ನ್ಯಾಯಾಲಯವು ಎತ್ತಿ ಹಿಡಿದಿದೆ.

ಈ ಹಿಂದಿನ ಪ್ರಕ್ರಿಯೆಯು, ಅಮೆರಿಕದ ವಹಿವಾಟು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಾಕಷ್ಟು ಹೊಡೆತ ನೀಡುತ್ತಿತ್ತು ಎಂಬ ಸರ್ಕಾರದ ವಾದಕ್ಕೆ ಮನ್ನಣೆಯನ್ನು ನೀಡಿದೆ. 


'ದೇಶದ ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿನ ಸಮಸ್ಯೆಯ ಪರಿಹಾರಕ್ಕಾಗಿ ತೀರ್ಮಾನ ತೆಗೆದುಕೊಳ್ಳಲು ಅಮೆರಿಕದ ಅಧ್ಯಕ್ಷರು ಶಾಸನಬದ್ಧ ಅಧಿಕಾರವನ್ನು ಹೊಂದಿದ್ದಾರೆ' ಎಂದು ಜಿಲ್ಲಾ ನ್ಯಾಯಾಧೀಶ ಬೆರಿಲ್‌ ಹೋವೆಲ್ ಅವರು 56 ಪುಟಗಳ ತೀರ್ಪಿನಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.

ಟ್ರಂಪ್ ನೇತೃತ್ವದ ಸರ್ಕಾರವು ಕಳೆದ ಸೆಪ್ಟೆಂಬರ್‌ನಲ್ಲಿ ಹೊಸ ಎಚ್‌-1ಬಿ ವೀಸಾ ಅರ್ಜಿಗಳ ಮೇಲೆ 1ಲಕ್ಷ ಅಮೆರಿಕನ್ ಡಾಲರ್ (ಅಂದಾಜು ₹90 ಲಕ್ಷ) ಶುಲ್ಕ ವಿಧಿಸುವ ನೂತನ ನೀತಿ ಜಾರಿಗೊಳಿಸಿತ್ತು. ಇದಕ್ಕೂ ಮುನ್ನ, ಕಂಪನಿಗಳಿಗೆ ಕೇವಲ 36 ಗಂಟೆಗಳ ಮೊದಲು ಸೂಚನೆ ನೀಡಿದ್ದರಿಂದ ಗೊಂದಲವೂ ಸೃಷ್ಟಿಯಾಗಿತ್ತು.

ಅಮೆರಿಕಕ್ಕೆ ಅಪಾರ ಪ್ರಮಾಣದಲ್ಲಿನ ವಲಸೆಯನ್ನು ತಡೆಗಟ್ಟಲಿಕ್ಕಾಗಿ ಟ್ರಂಪ್ ಅವರು ಎಚ್‌-1ಬಿ ವೀಸಾದ ಶುಲ್ಕವನ್ನು ಹೆಚ್ಚಳಗೊಳಿಸಿದ್ದರು. ಈ ವೀಸಾವು ದುರ್ಬಳಕೆ ಆಗುತ್ತಿದ್ದು, ಕಡಿಮೆ ಸಂಬಳಕ್ಕೆ ಕೆಲಸ ಮಾಡುವ ಜನರನ್ನು ಅಮೆರಿಕದ ನೌಕರರ ಜಾಗಕ್ಕೆ ಕರೆತರಲಾಗುತ್ತಿದೆ ಎಂದು ವಾದಿಸಿದ್ದರು.

ಇಲಾನ್‌ ಮಸ್ಕ್‌ ಸೇರಿದಂತೆ ಟೆಕ್‌ ಉದ್ಯಮಿಗಳು ಟ್ರಂಪ್ ಅವರ ಹೊಸ ನೀತಿಗೆ ವಿರೋಧ ವ್ಯಕ್ತಪಡಿಸಿದ್ದರು. ಹಲವರು ನ್ಯಾಯಾಲಯದ ಮೊರೆ ಹೊಕ್ಕಿದ್ದರು.

ಪ್ರತಿ ವರ್ಷವು 85 ಸಾವಿರ ಎಚ್‌-1ಬಿ ವೀಸಾಗಳನ್ನು ಅಮೆರಿಕವು ನೀಡುತ್ತದೆ. ಈ ಪೈಕಿ ಮೂರನೇ ಒಂದು ಭಾಗದಷ್ಟು ಭಾರತೀಯರ ಪಾಲಾಗುತ್ತಿದ್ದವು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries