ಕಾಸರಗೋಡು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ನಾಟ್ಯರತ್ನಂ ಕಣ್ಣನ್ ಪಾಟಾಳಿ ಸ್ಮಾರಕ ಕಥಕಳಿ ಟ್ರಸ್ಟ್ ಅರವತ್ತ್ ಬೇಕಲ, ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು, ಕೇರಳ ಗಡಿನಾಡ ಘಟಕ ಕಾಸರಗೋಡು ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸಂಯುಕ್ತ ಆಶ್ರಯದಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಮತ್ತು ಕರ್ನಾಟಕ ಜಾನಪದ ಪರಿಷತ್ತು ಯುಎಇ ಮತ್ತು ಒಮಾನ್ ಘಟಕದ ಸಹಕಾರದಲ್ಲಿ ಫೆ.1ರಂದು ಬೆಳಗ್ಗೆ 9ರಿಂದ ರಾತ್ರಿ 10ರ ತನಕ ಬೇಕಲ ಅರವತ್ತ್ ಆಂಫಿಥಿಯೇಟರ್ಸ್ "ಸಮನ್ವಯ" ಗಡಿನಾಡ ಜಾನಪದ ಉತ್ಸವ ನಡೆಯಲಿದೆ.
ಬೆಳಗ್ಗೆ 9ಕ್ಕೆ ಮುದಿಯಕ್ಕಲ್‍ನಿಂದ ಟ್ರಸ್ಟ್ ಕಚೇರಿ ವರೆಗೆ ಸಾಂಸ್ಕೃತಿಕ ಮೆರವಣಿಗೆ, 9.30ಕ್ಕೆ ಚೆಂಡೆಮೇಳ, 10ರಿಂದ ಸಮನ್ವಯ: ಕಥಕಳಿ-ಯಕ್ಷಗಾನ ಪ್ರದರ್ಶನ ನಡೆಯಲಿದೆ. 10.30ಕ್ಕೆ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಅಧ್ಯಕ್ಷ ಸೋಮಣ್ಣ ಬೇವಿನಮರದ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಕರ್ನಾಟಕ ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಉದ್ಘಾಟಿಸುವರು. ಕೇರಳ ಮ್ಯೂಸಿಯಂ ಮತ್ತು ಪ್ರಾಚ್ಯವಸ್ತುಇಲಾಖೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಪ್ರಶಸ್ತಿ ಪ್ರದಾನ ಮಾಡುವರು.
ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್, ಕರ್ನಾಟಕ ಜಾನಪದ ಪರಿಷತ್ತು, ಬೆಂಗಳೂರು ಅಧ್ಯಕ್ಷ ಪೆÇ್ರ.ಹಿ.ಚಿ. ಬೋರಲಿಂಗಯ್ಯ, ಗ.ಸಾ.ಸಾ.ಅ.ಪ್ರಾ. ಕಾಸರಗೋಡು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್ ನಾರಾಯಣ ತೊಟ್ಟಿತ್ತೋಡಿ, ಕೆ.ಆರ್.ಎಸ್.ಎಂ.ಕೇರಳ ಅಧ್ಯಕ್ಷ ರಾಘವ ಚೇರಾಲ್, ಕ.ಜಾ.ಪ ಕೇರಳ ಘಟಕ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಎಸ್. ನಾಸಿ, ಮಂಗಳೂರು ಅಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್, ಯುಎಇ ಘಟಕದ ಅಧ್ಯಕ್ಷ ಸದನ್ ದಾಸ್ ಶಿರೂರು, ಒಮಾನ್ ಘಟಕದ ಅಧ್ಯಕ್ಷ ಶಿವಾನಂದ ಕೋಟ್ಯಾನ್ ಕಟಪಾಡಿ ಅತಿಥಿಗಳಾಗಿ ಭಾಗವಹಿಸುವರು.
ಈ ಸಂದರ್ಭ ಶಿವಾನಂದ ಕೋಟ್ಯಾನ್ ಕಟಪಾಡಿ ಅವರ "ನಂಟು" ಕನ್ನಡ ಕೃತಿ ಸೇರಿದಂತೆ ಮೂರು ಪುಸ್ತಕಗಳ ಬಿಡುಗಡೆ ನಡೆಯುವುದು.
ಕೇರಳ ಮತ್ತು ಕರ್ನಾಟಕದ ನಡುವಿನ ಸಾಂಸ್ಕೃತಿಕ ಸಾಮರಸ್ಯವನ್ನು ಸಂಕೇತಿಸುವ ಈ ಉತ್ಸವದಲ್ಲಿ ಚೆಂಡೆ ಮೇಳದೊಂದಿಗೆ ವರ್ಣರಂಜಿತ ಮೆರವಣಿಗೆ ಪೂರಕ್ಕಳಿ, ಕೋಲ್ಕಳಿ, ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವೀರಗಾಸೆ, ನಾಸಿಕ್ ಡೋಳು, ಜಾನಪದ ನೃತ್ಯ, ಸಮೂಹ ನೃತ್ಯ, ಇತರ ಸಾಂಪ್ರದಾಯಿಕ ಮತ್ತು ಜಾನಪದ ಕಲಾ ಪ್ರಕಾರಗಳು, ಶ್ರೀಮಂತ ಜಾನಪದ ಮತ್ತು ಶಾಸ್ತ್ರೀಯ ಪ್ರದರ್ಶನ, ಕೈಕೊಟ್ಟಿಕಳಿ, ದಫ್ ಮುಟ್ಟ್, ಮಂಗಳಂಕಳಿ ಅಲಾಮಿಕಳಿ, ಇರುಳನೃತ್ಯಂ, ಯಕ್ಷಗಾನ, ಕಥಕ್ಕಳಿ, ಪೂಜಾಕುಣಿತ ರಾತ್ರಿ 7ರಿಂದ ಗಧಾಯುದ್ಧ ಯಕ್ಷಗಾನ, 8ರಿಂದ "ಲವಣಾಸುರವಧಮ್" ಕಥಕ್ಕಳಿ ಪ್ರದರ್ಶನ ನಡೆಯಲಿದೆ. ಈ ಸಂದರ್ಭ ಕಥಕ್ಕಳಿ, ಯಕ್ಷಗಾನ, ಮತ್ತು ಜಾನಪದ ಕಲೆ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಕೋಟಕಲ್ ಉಣ್ಣಿಕೃಷ್ಣನ್ ಮತ್ತು ಜಯರಾಮ ಪಟಾಳಿ ಪಡುಮಲೆ ಪ್ರಸ್ತುತಪಡಿಸುವರು.
ಬೋರ್ಗ್ ರೋಲ್ಸ್ ವಾರ್ನರ್ ಸಂಸ್ಥಾಪಕ ನಜೀರ್ ವೆಲಿಯಿಲ್ ಮತ್ತು ಕಲಾಪೆÇೀಷಕ ಡಾ.ಮಣಿಕಂಠನ್ ಮೇಲೋತ್ ಅವರಿಗೆ ಭಾವ ಭಾರತಿ ಪುರಸ್ಕಾರ, ಕಥಕ್ಕಳಿ ಕಲಾವಿದ ಕೋಟಕ್ಕಲ್ ದೇವದಾಸನ್ ಅವರಿಗೆ ನಾಟ್ಯಾಚಾರ್ಯ ಪುರಸ್ಕಾರ, ಡಾ.ವಾದ್ಯಪ್ರವೀಣ್ ಚೆರುತಾಯಂ ಕುಞÂರಾಮನ್ ಮಾರಾರ್ ಅವರಿಗೆ ಪ್ರತಿಭಾ ಪುರಸ್ಕಾರ(ಚೆಂಡೆ), ಕೋಟಕ್ಕಲ್ ರಮೇಶನ್ ಮಾರಾರ್ ಗೆ ಪ್ರತಿಭಾ ಪುರಸ್ಕಾರ (ಚೆಂಡೆ), ಕೋಡೋತ್ ತರವಾಡಿಗೆ ದೇಸಿ ಪುರಸ್ಕಾರ, ಕಲಾಪೆÇೀಷಕ ಪ್ರಕಾಶ್ ಕುಂಪಲ ಅವರಿಗೆ ಸಮಾಜರತ್ನ ಪ್ರಶಸ್ತಿ ಜಾನಪದ ಕಲಾಪೆÇೀಷಕ ಜೋಸೆಫ್ ಮಥಾಯಸ್ ದುಬೈ ಮತ್ತು ಅಂಕಣಕಾರ, ಜಾನಪದ ಕಲಾ ಪೆÇೀಷಕರು ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‍ಪೇಟೆ ಅವರಿಗೆ ಜಾನಪದ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುವುದು.




