HEALTH TIPS

2024-25ರಲ್ಲಿ 71 ದೇಶಭ್ರಷ್ಟರು ವಿದೇಶಗಳಲ್ಲಿ ಪತ್ತೆ; ಕಳೆದ 12 ವರ್ಷಗಳಲ್ಲಿ ಅತ್ಯಂತ ಹೆಚ್ಚು: ವರದಿ

ನವದೆಹಲಿ: ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿರುವ 71 ದೇಶಭ್ರಷ್ಟರು 2024-25ರಲ್ಲಿ ವಿದೇಶಗಳಲ್ಲಿ ಪತ್ತೆಯಾಗಿದ್ದು, ಇದು ಕಳೆದ 12 ವರ್ಷಗಳಲ್ಲಿ ಅತ್ಯಂತ ಹೆಚ್ಚು ಎಂದು ಸರಕಾರಿ ದತ್ತಾಂಶಗಳು ತೋರಿಸಿವೆ ಎಂದು thehindu.com ವರದಿ ಮಾಡಿದೆ.

ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ (ಡಿಒಪಿಟಿ) 2024-25ರ ವಾರ್ಷಿಕ ವರದಿಯ ಪ್ರಕಾರ ಸಿಬಿಐ ಭಾರತಕ್ಕೆ ಬೇಕಾಗಿರುವ 71 ಜನರು ವಿದೇಶಗಳಲ್ಲಿರುವುದನ್ನು ಪತ್ತೆ ಹಚ್ಚಿದೆ ಮತ್ತು ಆ ವರ್ಷ 27 ದೇಶಭ್ರಷ್ಟರು ಭಾರತಕ್ಕೆ ಮರಳಿದ್ದಾರೆ.

ಹಿಂದಿನ ವರ್ಷಗಳ ಡಿಒಪಿಟಿ ವರದಿಗಳ ಪ್ರಕಾರ ಕಳೆದ ದಶಕದಲ್ಲಿ ವಿದೇಶಗಳಲ್ಲಿ ಪತ್ತೆಯಾಗಿದ್ದ ದೇಶಭ್ರಷ್ಟರ ಸಂಖ್ಯೆ 15 (2013)ಮತ್ತು 42 (2015)ರ ನಡುವೆ ಇತ್ತು. ಕಳೆದ ವರ್ಷ ಇಂತಹವರ ಸಂಖ್ಯೆ 71ಕ್ಕೇರಿದೆ.

ವಾರ್ಷಿಕವಾಗಿ ಭಾರತಕ್ಕೆ ಹಸ್ತಾಂತರಿಸಲ್ಪಟ್ಟ ಅಥವಾ ಗಡಿಪಾರುಗೊಂಡ ದೇಶಭ್ರಷ್ಟರ ಸಂಖ್ಯೆ 5 ಮತ್ತು 29ರ ನಡುವೆ ಇದ್ದು, ಅತ್ಯಧಿಕ ಸಂಖ್ಯೆಯ ದೇಶಭ್ರಷ್ಟರನ್ನು 2023ರಲ್ಲಿ ಭಾರತಕ್ಕೆ ಒಪ್ಪಿಸಲಾಗಿತ್ತು.

ವಿದೇಶಾಂಗ ಸಚಿವಾಲಯವು ಡಿ.19,2025ರಂದು ಸಂಸತ್ತಿನಲ್ಲಿ ನೀಡಿದ ಉತ್ತರದ ಪ್ರಕಾರ ಭಾರತವು 48 ದೇಶಗಳೊಂದಿಗೆ ಹಸ್ತಾಂತರ ಒಪ್ಪಂದಗಳು ಮತ್ತು 12 ದೇಶಗಳೊಂದಿಗೆ ಹಸ್ತಾಂತರ ವ್ಯವಸ್ಥೆಗಳನ್ನು ಹೊಂದಿದೆ.

ಭಾರತವು ಭ್ರಷ್ಟಾಚಾರದ ವಿರುದ್ಧ ವಿಸ್ವಸಂಸ್ಥೆಯ ನಿರ್ಣಯದಂತಹ ಬಹುಪಕ್ಷೀಯ ನಿರ್ಣಯಗಳೊಂದಿಗೂ ಗುರುತಿಸಿಕೊಂಡಿದೆ. ಇವು ಈ ನಿರ್ಣಯಗಳೊಂದಿಗೆ ಗುರುತಿಸಿಕೊಂಡಿರುವ ಇತರ ದೇಶಗಳಿಂದ ದೇಶಭ್ರಷ್ಟರನ್ನು ಮರಳಿ ತರಲು ಕಾನೂನು ಬೆಂಬಲವಾಗಿ ಕಾರ್ಯ ನಿರ್ವಹಿಸುತ್ತವೆ.

ಕಳೆದ ಐದು ವರ್ಷಗಳಲ್ಲಿ ಭಾರತವು 137 ಹಸ್ತಾಂತರ ಮನವಿಗಳನ್ನು ವಿದೇಶಗಳಿಗೆ ಸಲ್ಲಿಸಿದೆ. 134 ಮನವಿಗಳು ಸ್ವೀಕೃತವಾಗಿದ್ದರೂ ಈ ಪೈಕಿ 125 ಮನವಿಗಳು ಇನ್ನೂ ವಿದೇಶಿ ಸರಕಾರಗಳ ಬಳಿ ಬಾಕಿಯುಳಿದಿವೆ. ಮೂರು ಮನವಿಗಳು ತಿರಸ್ಕೃತಗೊಂಡಿವೆ ಎಂದು ವಿದೇಶಾಂಗ ಸಚಿವಾಲಯವು ತಿಳಿಸಿತ್ತು.

ಕಳೆದ ಐದು ವರ್ಷಗಳಲ್ಲಿ ದೇಶದಿಂದ ಪರಾರಿಯಾಗಿದ್ದ 25 ಜನರನ್ನು ಯಶಸ್ವಿಯಾಗಿ ಭಾರತಕ್ಕೆ ಹಸ್ತಾಂತರಿಸಿಕೊಳ್ಳಲಾಗಿದೆ ಎಂದೂ ಅದು ತಿಳಿಸಿದೆ.

ಸಿಬಿಐನ ಜಾಗತಿಕ ಕಾರ್ಯಾಚರಣೆಗಳ ಕೇಂದ್ರವು ವಿದೇಶಿ ಕಾನೂನು ಜಾರಿ ಸಂಸ್ಥೆಗಳ ಸಹಕಾರದೊಂದಿಗೆ ಇಂಟರ್‌ಪೋಲ್ ಮೂಲಕ ಅಪೇಕ್ಷಿತ ಕ್ರಿಮಿನಲ್‌ಗಳು ಮತ್ತು ದೇಶಭ್ರಷ್ಟರನ್ನು ಪತ್ತೆ ಹಚ್ಚುತ್ತದೆ.

ಅಪೇಕ್ಷಿತ ಅಪರಾಧಿಗಳು ಇರುವ ಸ್ಥಳವನ್ನು ಖಚಿತಪಡಿಸಿಕೊಂಡ ಬಳಿಕ ಅವರನ್ನು ಭಾರತಕ್ಕೆ ಮರಳಿ ಕರೆತರಲು ಸಿಬಿಐ ಸಂಬಂಧಿತ ಕಾನೂನು ಜಾರಿ ಸಂಸ್ಥೆಗಳು,ಸಂಬಂಧಿತ ದೇಶಗಳಲ್ಲಿಯ ಇಂಟರ್‌ಪೋಲ್ ನ್ಯಾಷನಲ್ ಸೆಂಟ್ರಲ್ ಬ್ಯೂರೋ,ಗೃಹ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳೊಂದಿಗೆ ಸಮನ್ವಯ ಸಾಧಿಸುತ್ತದೆ ಎಂದು ವರದಿಯು ತಿಳಿಸಿದೆ.

2024-25ರ ಅವಧಿಯಲ್ಲಿ 74 ಲೆಟರ್ಸ್ ರೊಗೇಟರಿ ಅಥವಾ ನ್ಯಾಯಾಂಗ ವಿನಂತಿಗಳನ್ನು ವಿದೇಶಿ ಸರಕಾರಗಳಿಗೆ ಕಳುಹಿಸಲಾಗಿತ್ತು. ಈ ಪೈಕಿ 54 ಸಿಬಿಐ ಪ್ರಕರಣಗಳಿಗೆ ಹಾಗೂ 20 ರಾಜ್ಯ ಮತ್ತು ಕೇಂದ್ರ ಕಾನೂನು ಜಾರಿ ಸಂಸ್ಥೆಗಳಿಗೆ ಸಂಬಂಧಿಸಿದ್ದವು. 2024-25ರಲ್ಲಿ 42 ನ್ಯಾಯಾಂಗ ವಿನಂತಿಗಳು ಸಂಪೂರ್ಣವಾಗಿ ಕಾರ್ಯಗತಗೊಂಡಿದ್ದವು.

2025,ಮಾ.31ಕ್ಕೆ ಇತರ ದೇಶಗಳಲ್ಲಿ ಒಟ್ಟು 533 ನ್ಯಾಯಾಂಗ ಮನವಿಗಳು ಬಾಕಿಯಿದ್ದವು ಎಂದೂ ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries