ನವದೆಹಲಿ: ಚುನಾವಣಾ ಆಯೋಗದ 'ಇಂಡಿಯಾ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಡೆಮಾಕ್ರಸಿ ಅಂಡ್ ಎಲೆಕ್ಷನ್ ಮ್ಯಾನೇಜ್‌ಮೆಂಟ್' (ಐಐಐಡಿಇಎಂ) ವತಿಯಿಂದ ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಹಣೆ ಕುರಿತು ಜನವರಿ 21ರಿಂದ 23ರವರೆಗೆ 'ಐಐಐಡಿಇಎಂ-2026' ಅಂತರರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ.
'ಅಂತರ್ಗತ, ಶಾಂತಿಯುತ, ಸ್ಥಿತಿಸ್ಥಾಪಕ ಮತ್ತು ಸುಸ್ಥಿರ ಜಗತ್ತಿಗಾಗಿ ಪ್ರಜಾಪ್ರಭುತ್ವ' ಎಂಬುದು ಸಮ್ಮೇಳನದ ಘೋಷವಾಕ್ಯವಾಗಿದೆ.
ಚುನಾವಣಾ ನಿರ್ವಹಣೆ ಮತ್ತು ಪ್ರಜಾಪ್ರಭುತ್ವ ಕ್ಷೇತ್ರದಲ್ಲಿ ಭಾರತವು ಆಯೋಜಿಸುತ್ತಿರುವ ಅತಿದೊಡ್ಡ ಜಾಗತಿಕ ಸಮ್ಮೇಳನವಾಗಿದೆ. ಇದರಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳ ಚುನಾವಣಾ ನಿರ್ವಹಣಾ ಸಂಸ್ಥೆಗಳ ಸುಮಾರು 100 ಅಂತರರಾಷ್ಟ್ರೀಯ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.

