ನವದೆಹಲಿ: ಶಬರಿಮಲೆ ಚಿನ್ನದ ದರೋಡೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಮೂರು ರಾಜ್ಯಗಳಲ್ಲಿ ದಾಳಿ ನಡೆಸಿದೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ನಿಬಂಧನೆಗಳ ಅಡಿಯಲ್ಲಿ ಕೇರಳ, ಕರ್ನಾಟಕ ಮತ್ತು ತಮಿಳುನಾಡಿನ ಸುಮಾರು 21 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.
ಪ್ರಮುಖ ಆರೋಪಿ ಉಣ್ಣಿಕೃಷ್ಣನ್ ಪೋತ್ತಿಗೆ ಸಂಬಂಧಿಸಿದ ಬೆಂಗಳೂರಿನ ಸ್ಥಳಗಳು ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಾಜಿ ಅಧ್ಯಕ್ಷ ಎ ಪದ್ಮಕುಮಾರ್‍ಗೆ ಸಂಬಂಧಿಸಿದ ಸ್ಥಳಗಳು ಈ ದಾಳಿಗಳಲ್ಲಿ ಸೇರಿವೆ.
ಏತನ್ಮಧ್ಯೆ, ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‍ಐಟಿ) ಶಬರಿಮಲೆ ಸನ್ನಿಧಾನಕ್ಕೆ ತಲುಪಿದೆ. ಹೈಕೋರ್ಟ್‍ನ ಅನುಮತಿಯೊಂದಿಗೆ, ತಂಡವು ಬಾಗಿಲ ದಾರಂದ, ಗೋಡೆಗಳಿಗೆ ಹೊದೆಸಿದ ಚಿನ್ನದ ಪ್ರಮಾಣವನ್ನು ಅಳೆದು ಮಾದರಿಗಳನ್ನು ಸಂಗ್ರಹಿಸುತ್ತದೆ.

