ತ್ರಿಶೂರ್: ಗುರುವಾಯೂರ್ ದೇವಾಲಯದಲ್ಲಿ ಇಂದು (ಭಾನುವಾರ) 262 ವಿವಾಹಗಳು ನಡೆದಿರುವುದು ವರದಿಯಾಗಿದೆ. ಹೆಚ್ಚಿನ ಸಂಖ್ಯೆಯ ವಿವಾಹಗಳು ನಡೆಯುತ್ತಿರುವುದರಿಂದ, ಗುರುವಾಯೂರ್ ದೇವಸ್ವಂ ದರ್ಶನ ಮತ್ತು ವಿವಾಹ ಸಮಾರಂಭಗಳನ್ನು ಸುಗಮವಾಗಿ ನಡೆಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರು ಯಾವುದೇ ಅಡೆತಡೆಯಿಲ್ಲದೆ ದೇವಾಲಯಕ್ಕೆ ಭೇಟಿ ನೀಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಸಮಯಕ್ಕೆ ಸರಿಯಾಗಿ ವಿವಾಹಗಳು ಪೂರ್ಣಗೊಳ್ಳಲು ಬೆಳಿಗ್ಗೆ 4 ಗಂಟೆಯಿಂದ ಕಾರ್ಯಕ್ರಮಗಳು ಪ್ರಾರಂಭವಾದವು. ತಾಳಿಕಟ್ಟಲು 5 ಮಂಟಪಗಳನ್ನು ಸ್ಥಾಪಿಸಲಾಗಿತ್ತು. ತಾಳಿಕಟ್ಟಿ ಸಮಾರಂಭವನ್ನು ನಿರ್ವಹಿಸಲು ದೇವಾಲಯವು ಮಂಟಪಗಳಿಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿತ್ತು. ಪೂರ್ವ ದಿಕಕಿನಲ್ಲಿ ಭಕ್ತರಿಗೆ ಏಕಮುಖವಾಗಿ ಹಾದುಹೋಗಲು ಅವಕಾಶ ನೀಡುವ ಮೂಲಕ ದೇವಾಲಯವು ಜನಸಂದಣಿಯನ್ನು ನಿಯಂತ್ರಿಸಿತು.
ದರ್ಶನ ವ್ಯವಸ್ಥೆ
ಭಾನುವಾರವಾದ್ದರಿಂದ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುವ ನಿರೀಕ್ಷೆಯಿದ್ದುದರಿಂದ, ದರ್ಶನಕ್ಕೆ ಅನುಕೂಲವಾಗುವಂತೆ ದೇವಾಲಯದೊಳಗೆ ಪ್ರದಕ್ಷಿಣೆ, ಆದಿ ಪ್ರದಕ್ಷಿಣೆ ಮತ್ತು ಶಯನ ಪ್ರದಕ್ಷಿಣೆಯನ್ನು ಅನುಮತಿಸಲಾಗಿಲ್ಲ. ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರು ಮತ್ತು ವಿವಾಹ ಸಮಾರಂಭದಲ್ಲಿ ಭಾಗವಹಿಸುವವರಿಗೆ ಆರೈಕೆ ಮತ್ತು ಸಹಾಯವನ್ನು ಒದಗಿಸಲು ದೇವಸ್ಥಾನ ಸಿಬ್ಬಂದಿ, ಭದ್ರತಾ ಇಲಾಖೆ ಮತ್ತು ಪೋಲೀಸರು ಸಹಕರಿಸಿದರು. ದೇವಸ್ಥಾನ ದರ್ಶನ ಮತ್ತು ವಿವಾಹ ಸಮಾರಂಭಗಳು ಸುಗಮವಾಗಿ ನಡೆಯಲು ಸಹಕರಿಸಿದ ಭಕ್ತ ಜನರನ್ನು ದೇವಸ್ಥಾನವು ಅಭಿನಂದಿಸಿದೆ.

