ಬ್ಯಾಂಕಾಕ್: ಈಶಾನ್ಯ ಥಾಯ್ಲೆಂಡ್‌ನಲ್ಲಿ ಚಲಿಸುತ್ತಿದ್ದ ಪ್ರಯಾಣಿಕ ರೈಲಿನ ಮೇಲೆ ನಿರ್ಮಾಣ ಕ್ರೇನ್ ಬಿದ್ದ ಪರಿಣಾಮ, ರೈಲು ಹಳಿ ತಪ್ಪಿ ಬೆಂಕಿ ಅವಘಡ ಸಂಭವಿಸಿ ಕನಿಷ್ಠ 29 ಜನರು ಮೃತಪಟ್ಟಿದ್ದಾರೆ.
ದುರ್ಘಟನೆಯಲ್ಲಿ 64 ಜನರು ಗಾಯಗೊಂಡಿದ್ದು, ರಕ್ಷಣಾ ಕಾರ್ಯಕರ್ತರು ರೈಲಿನಡಿಯಲ್ಲಿ ಸಿಲುಕಿರುವವರಿಗಾಗಿ ಶೋಧ ಮುಂದುವರಿಸಿದ್ದಾರೆ.
ಚೀನಾವನ್ನು ಆಗ್ನೇಯ ಏಷ್ಯಾದೊಂದಿಗೆ ಸಂಪರ್ಕಿಸುವ ಮಹತ್ವಾಕಾಂಕ್ಷೆಯ ಯೋಜಿತ ಹೈ-ಸ್ಪೀಡ್ ರೈಲು ಮಾರ್ಗದಲ್ಲಿ ಈ ಘಟನೆ ನಡೆದಿದೆ.
ದುರಂತಕ್ಕೀಡಾದ ರೈಲು ಬ್ಯಾಂಕಾಕ್‌ನಿಂದ ಉಬೊನ್ ರಟ್ಚತಾನಿ ಪ್ರಾಂತ್ಯಕ್ಕೆ ಪ್ರಯಾಣಿಸುತ್ತಿದ್ದಾಗ ಹಳಿಯ ಮೇಲಿನ ಭಾಗವನ್ನು ನಿರ್ಮಿಸಲು ಬಳಸುತ್ತಿದ್ದ ಕ್ರೇನ್ ಉರುಳಿಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

