ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಪೂಜ್ಯ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿಯವರ ದಿವ್ಯಉಪಸ್ಥಿತಿಯಲ್ಲಿ, ಬ್ರಹ್ಮಶ್ರಿ ೀವಿನೀತ್ ಭಟ್ ತಿರುವನಂತಪುರ ಅವರ ಆಚಾರ್ಯತ್ವದಲ್ಲಿ ಜ. 03 ರಂದು ಶನಿವಾರ ಲೋಕ ಕಲ್ಯಾಣಾರ್ಥವಾಗಿ ಶ್ರೀಚಕ್ರ ನವಾವರಣ ಪೂಜೆ ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿರುವುದು.
ಅಂದು ಪ್ರಾತಃಕಾಲ 7ಕ್ಕೆ ಗಣಪತಿ ಹವನ, 10ಕ್ಕೆ ಶ್ರೀಚಕ್ರಪೂಜೆ ಆರಂಭ, 10:30ಕ್ಕೆ ನವಾವರಣ ಕೀರ್ತನಾಲಾಪನೆ ಬಳ್ಳಪದವು ಯೋಗೀಶ ಶರ್ಮ ಮತ್ತು ಬಳಗ ವೀಣಾವಾದಿನಿ ತಂಡದವರಿಂದ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 4:30ಕ್ಕೆ ಸಾಮೂಹಿಕ ಶ್ರೀಲಲಿತಾ ಸಹಸ್ರನಾಮ ಪಾರಾಯಣಕ, 7:ಕ್ಕೆ ಶ್ರೀಮದ್ ಎಡನೀರು ಮಠದ ಪರಮಪೂಜ್ಯ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಆಗಮಿಸುವರು. ಬಳಿಕ ಅಷ್ಟಾವದಾನ ಸೇವೆ ಜರಗಲಿದೆ. ರಾತ್ರಿ 7:30ಕ್ಕೆ ಮಹಾಪೂಜೆ, ಬಳಿಕ ಅನ್ನಸಂತರ್ಪಣೆ, ರಾತ್ರಿ 8 ರಿಂದ ಸದ್ಗುರು ಶ್ರೀನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ತಾಲೀಮು ಪ್ರದರ್ಶನ ಜರಗಲಿರುವುದೆಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


