ಮಲಪ್ಪುರಂ: ಕೇರಳದ ಕುಂಭಮೇಳ ಎಂದೇ ಕರೆಯಲ್ಪಡುವ ತಿರುನಾವಯ ಮಹಾಮಘ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ನವಮುಕುಂದ ದೇವಸ್ಥಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ರಾಜೇಂದ್ರ ಆರ್ಲೇಕರ್ ಉತ್ಸವವನ್ನು ಉದ್ಘಾಟಿಸಿದರು.
ಮುಖ್ಯ ಪೆÇೀಷಕ ದೇವಸ್ವಂ ಸಚಿವ ವಿ.ಎನ್. ವಾಸವನ್. ಮಾತಾ ಅಮೃತಾನಂದಮಯಿ ಮತ್ತು ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಮುಖ್ಯ ಅತಿಥಿಗಳಾಗಿದ್ದರು.
ಪಿ.ಕೆ. ಕೇರಳ ವರ್ಮ ರಾಜಾ ಸಾಮೂದಿರಿಪಾಡ್, ಎಂ.ಸಿ. ಶ್ರೀಧರ ವರ್ಮ ರಾಜಾ ವಳ್ಳುವಕೋನತಿರಿ, ಶ್ರೀ ಅಂಬಾಲಿಕಾ ತಂಬುರಾಟ್ಟಿ ವೆಟ್ಟಂ, ರಾಮನ್ ರಾಜಮನ್ನನ್, ಕೋವಿಲ್ ಮಲ ಶ್ರೀ ಎಸ್. ಅನುರಾಜನ್ ರಾಜ ಪೆರುಂಪದಪ್ಪಂ ಸ್ವರೂಪಂ, ಮತ್ತು ಅವಿಟ್ಟಂ ತಿರುನಾಳ್ ಆದಿತ್ಯ ವರ್ಮ ವೇನಾಡ್ ಸ್ವರೂಪಂ ಪೋಷಕರಾಗಿದ್ದಾರೆ.
ತಿರುನಾವಯ ಮಹಾಮಘ ಮಹೋತ್ಸವವು ಜನವರಿ 18 ರಿಂದ ಫೆಬ್ರವರಿ 3 ರವರೆಗೆ ನಡೆಯಲಿದೆ, ಈ ನಡುವೆ ಮಹಾಮಘ ಮಹೋತ್ಸವದ ಅಂಗವಾಗಿ ನಿರ್ಮಿಸಲಾಗುತ್ತಿರುವ ತಾತ್ಕಾಲಿಕ ಸೇತುವೆಗೆ ಗ್ರಾಮಾಧಿಕಾರಿ ಈ ಹಿಂದೆ ಸ್ಟಾಪ್ ಮೆಮೋ ನೀಡಿದ್ದರು.
ತಿರುನವಾಯ ಗ್ರಾಮಾಧಿಕಾರಿ ಕೇರಳ ನದಿ ದಂಡೆಯ ಸಂರಕ್ಷಣಾ ಕಾಯ್ದೆಯಡಿ ಸ್ಟಾಪ್ ಮೆಮೊ ನೀಡಿದ್ದಾರೆ. ಇದರ ವಿರುದ್ಧ ಸಂಘಟಕರು ಹೈಕೋರ್ಟ್‍ನಲ್ಲಿ ಅರ್ಜಿಯನ್ನೂ ಸಲ್ಲಿಸಿದ್ದರು. ಗ್ರಾ.ಪಂ.ಅಧಿಕಾರಿಗಳ ಕ್ರಮ ಕಾನೂನು ಬಾಹಿರ ಹಾಗೂ ಸ್ವೇಚ್ಛಾಚಾರದಿಂದ ಕೂಡಿದೆ ಎಂದು ಮನವಿಯಲ್ಲಿ ದೂರಲಾಗಿದೆ.

