ತ್ರಿಶೂರ್: 64ನೇ ರಾಜ್ಯ ಶಾಲಾ ಕಲೋತ್ಸವ ಮುಕ್ತಾಯಗೊಂಡಿದ್ದು ಚಿನ್ನದ ಕಪ್ ಕಣ್ಣೂರು ಪಾಲಾಗಿದೆ.
ಹಾಲಿ ಚಾಂಪಿಯನ್ ತ್ರಿಶೂರ್ ಎರಡನೇ ಸ್ಥಾನದಲ್ಲಿದೆ. ಕಣ್ಣೂರು 1023 ಅಂಕಗಳೊಂದಿಗೆ ಕಲಾ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಆತಿಥೇಯ ತ್ರಿಶೂರ್ 1018 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ.
ಕೋಝಿಕ್ಕೋಡ್ 1013 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಸಂಜೆ ನಡೆದ ರಾಜ್ಯ ಕಲೋತ್ಸವದ ಸಮಾರೋಪ ಸಮಾರಂಭವನ್ನು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಉದ್ಘಾಟಿಸಿದರು. ಸಮಾರಂಭದಲ್ಲಿ ಮೋಹನ್ ಲಾಲ್ ಮುಖ್ಯ ಅತಿಥಿಯಾಗಿದ್ದರು.

