ಇಂಡೋನೇಷ್ಯಾ ರಾಜಧಾನಿ ಜಕಾರ್ತಾದ ಆಗ್ನೇಯದಲ್ಲಿರುವ ಪಶ್ಚಿಮ ಬಂಡಂಗ್ ಪ್ರದೇಶದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ತೀವ್ರ ಮಳೆಯ ನಂತರ ಶನಿವಾರ ಬೆಳಿಗ್ಗೆ 2 ಗಂಟೆ ಸುಮಾರು ಭಾರಿ ಭೂಕುಸಿತ ಸಂಭವಿಸಿದೆ.
ಭೂಕುಸಿತದಲ್ಲಿ ಮೃತರ ಸಂಖ್ಯೆ ಏರಿಕೆಯಾಗಬಹುದು ಎಂದು ಸ್ಥಳದಲ್ಲಿರುವ ರಕ್ಷಣಾ ಪಡೆ ಹಾಗೂ ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ಬಂಡಂಗ್ ಪ್ರದೇಶದಲ್ಲಿ ವಸತಿ ಪ್ರದೇಶಗಳ ಮೇಲೆ ಭೂಕುಸಿತ ಉಂಟಾಗಿದೆ. ಇದೇ ಪ್ರದೇಶದಲ್ಲಿ ಇನ್ನೂ ಹಲವು ಪ್ರದೇಶಗಳಿಗೆ ಭೂಕುಸಿತ, ಪ್ರವಾಹ, ಪ್ರತಿಕೂಲ ಹವಾಮಾನದ ಎಚ್ಚರಿಕೆಗಳನ್ನು ಸಹ ನೀಡಲಾಗಿದೆ.
ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಆಗಾಗ ಭಾರಿ ಮಳೆಯಿಂದ ಕಾರ್ಯಾಚರಣೆಗೆ ಅಡ್ಡಿಯೂ ಉಂಟಾಗುತ್ತಿದೆ ಎಂದು ತಿಳಿದು ಬಂದಿದೆ.
ಬಂಡಂಗ್ ಪ್ರದೇಶದಲ್ಲಿ ಬಹುತೇಕ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಪ್ರಾಕೃತಿಕ ವಿಪತ್ತುಗಳ ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ಅಬ್ದುಲ್ ಮುಹಾರಿ ಬಿಬಿಸಿ ವಾಹಿನಿಗೆ ಪ್ರತಿಕ್ರಿಯೆ ನೀಡಿದ್ದಾರೆ.

