ಮುಳ್ಳೇರಿಯ: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಮೂರು ಪ್ರತ್ಯೇಕ ಪ್ರಕರಣಕ್ಕೆ ಸಂಬಂಧಿಸಿ 70ರ ವೃದ್ಧ ಸೇರಿದಂತೆ ಮೂವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ 13ರ ಹರೆಯದ ಬಾಲಕಿ ಮನೆಗೆ ತೆರಳಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ 70ರ ಹರೆಯದ ಗಂಗಾಧರನ್ ಎಂಬಾತನನ್ನು ಬಂಧಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ವೆಳ್ಳರಿಕುಂಡು ಪೊಲೀಸ್ ಠಾಣೆ ವ್ಯಾಪ್ತಿಯ 16ರ ಹರೆಯದ ಬಾಲಕಿಯನ್ನು ಹಿಡಿದೆಳೆದು ಕಿರುಕುಳ ನೀಡಿದ ಬಾಲಕಿ ಸಂಬಂಧಿಯಾದ 41ರ ಹರೆಯದ ವ್ಯಕ್ತಿಯನ್ನುಬಂಧಿಸಲಾಗಿದೆ. ಒಂಬತ್ತರ ಹರೆಯದ ಬಾಲಕಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ 18ರ ಹರೆಯದ ಯುವಕನನ್ನು ಚಂದೇರ ಠಾಣೆ ಪೊಲೀಸರುಬಂಧಿಸಿದ್ದಾರೆ. ಈ ಮೂರೂ ಮಂದಿ ವಿರುದ್ಧ ಪೋಕ್ಸೋ ಅನ್ವಯ ಕೇಸು ದಾಖಲಿಸಲಾಗಿದೆ.

