ಕಣ್ಣೂರು: ವೆಲ್ಲೂರಿನ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ವಿ. ಕುಂಞÂ ಕೃಷ್ಣನ್ ಅವರ ಮನೆಗೆ ಸಿಪಿಎಂ ಪ್ರತಿಭಟನೆ ನಡೆಸಿತು. ಪ್ರತಿಭಟನೆಯ ಜೊತೆಗೆ ಬೆದರಿಕೆ ಮತ್ತು ಅವಾಚ್ಯ ಶಬ್ದಗಳಿಂದ ಬಯ್ಯಲಾಗಿತ್ತು ಎಂದು ಹೇಳಲಾಗಿದೆ. ಪೋಲೀಸರು ಸ್ಥಳಕ್ಕೆ ತಲುಪಿ ಹೆಚ್ಚಿನ ಘರ್ಷಣೆಗಳಾಗದಂತೆ ತಡೆದರು.
ಘಟನೆಯ ಸಮಯದಲ್ಲಿ ಕುಂಞÂ ಕೃಷ್ಣನ್ ಮನೆಯಲ್ಲಿ ಇದ್ದಿರಲಿಲ್ಲ. ಕೊಲೆಯಾದ ಸಿಪಿಎಂ ಕಾರ್ಯಕರ್ತ ಧನರಾಜ್ ಅವರ ಸಹೋದರನ ವಿವಾಹದಲ್ಲಿ ಭಾಗವಹಿಸಲು ಅವರು ಪಯ್ಯನ್ನೂರಿಗೆ ತೆರಳಿದ್ದರು ಎಂದು ವರದಿಯಾಗಿದೆ. ಆ ಪ್ರದೇಶದ ಪಕ್ಷದ ಕಾರ್ಯಕರ್ತರ ಒಂದು ವಿಭಾಗ ಘೋಷಣೆಗಳನ್ನು ಕೂಗಿ ಮನೆಯ ಮುಂದೆ ಸಿಡಿಮದ್ದು ಸಿಡಿಸಿದರು.
ಸೋಮವಾರ ನಡೆದ ಜಿಲ್ಲಾ ಸಮಿತಿ ಸಭೆಯಲ್ಲಿ ವಿ. ಕುಂಞÂ ಕೃಷ್ಣನ್ ಅವರನ್ನು ಸಿಪಿಎಂ ಪ್ರಾಥಮಿಕ ಸದಸ್ಯತ್ವದಿಂದ ಹೊರಹಾಕಲಾಯಿತು. ಭಾನುವಾರ ನಡೆದ ಜಿಲ್ಲಾ ಕಾರ್ಯದರ್ಶಿ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಜಿಲ್ಲಾ ಸಮಿತಿ ಅಂಗೀಕರಿಸಿದೆ.

