HEALTH TIPS

Apple Siri ಇನ್ನು ChatGPT ಶೈಲಿಯ ಚಾಟ್‌ಬಾಟ್ ಆಗಿ ಕೆಲಸ ಮಾಡಲಿದೆ: ವರದಿ

 ಟೆಕ್ ದೊಡ್ಡಣ್ಣ ಎನಿಸಿರುವ Apple ಕಂಪನಿಯು ತನ್ನ ಡಿಜಿಟಲ್ ಅಸಿಸ್ಟಂಟ್‌ Siri ಯನ್ನು ಸಂಪೂರ್ಣವಾಗಿ ಹೊಸ ರೂಪದಲ್ಲಿ ಪರಿಚಯಿಸುವ ಯೋಜನೆಯಲ್ಲಿ ಕೆಲಸ ಮಾಡುತ್ತಿದೆ. ಈ ಬದಲಾವಣೆಯ ಮೂಲಕ Siri, ಆಪಲ್‌ನ ಮೊದಲ ನಿಜವಾದ AI ಚಾಟ್‌ಬಾಟ್ ಆಗಿ ರೂಪಾಂತರಗೊಳ್ಳಲಿದೆ ಎಂದು Bloomberg’s Mark Gurman ವರದಿ ಮಾಡಿದ್ದಾರೆ. ಈ ಮಹತ್ವದ ಅಪ್‌ಡೇಟ್ ಸಂಸ್ಥೆಯ iOS 27 ಮತ್ತು macOS 27 ಆವೃತ್ತಿಯ ಜೊತೆಗೆ ಮುಂಬರುವ ಆಪಲ್‌ನ ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ (WWDC) ನಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. 


ಹೊಸ ಆವೃತ್ತಿಗೆ Campos ಕೋಡ್ ನೇಮ್

ಬ್ಲೂಮ್‌ಬರ್ಗ್‌ನ ಮಾರ್ಕ್ ಗುರ್ಮನ್ ಪ್ರಕಾರ Apple ಕಂಪನಿಯು ನೂತನವಾಗಿ Siri ಆವೃತ್ತಿಯನ್ನು ಅಭಿವೃದ್ಧಿ ಮಾಡುತ್ತಿದ್ದು ಅದಕ್ಕೆ ಆಂತರಿಕವಾಗಿ Campos ಎಂಬ ಕೋಡ್ ನೇಮ್ ಅನ್ನು ನೀಡಲಾಗಿದೆ. ಇದು ವಾಯ್ಸ್‌ ಹಾಗೂ ಟೆಕ್ಸ್ಟ್‌ ಇನ್‌ಪುಟ್ಸ್‌ಗಳನ್ನು ಸಪೋರ್ಟ್‌ ಮಾಡಲಿದೆ. ಈ ಹೊಸ Siri ಆವೃತ್ತಿಯು, iPhone, iPad ಮತ್ತು Mac ನಲ್ಲಿ ಈಗಿರುವ Siri ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸಲಿದೆ. ಹೊಸ Siri ChatGPT ಶೈಲಿಯ ಸಂಭಾಷಣಾತ್ಮಕ ಚಾಟ್‌ಬಾಟ್ ಆಗಿರಲಿದೆ ಎನ್ನಲಾಗಿದೆ.

ಪ್ರಸ್ತುತ ಆವೃತ್ತಿಯ Siri ಮುಖ್ಯವಾಗಿ ಪೂರ್ವನಿರ್ಧರಿತ ಕಮಾಂಡ್‌ಗಳು ಹಾಗೂ ಚಿಕ್ಕ ಉತ್ತರಗಳ ಮೇಲೆ ಹೆಚ್ಚು ಅವಲಂಬಿತವಾಗಿದ್ದರೆ, ನೂತನ Siri ChatGPT ಮಾದರಿಯ ಸಂಭಾಷಣಾತ್ಮಕ ಚಾಟ್‌ಬಾಟ್ ಆಗಿ ಕೆಲಸ ಮಾಡಲಿದೆ. ಇದರಿಂದ ಬಳಕೆದಾರರು ಒಂದೇ ಸೆಷನ್‌ನಲ್ಲಿ ನಿರಂತರವಾಗಿ ಪ್ರಶ್ನೆಗಳನ್ನು ಕೇಳುವುದು, ಹಲವು ಹಂತಗಳ ಮಾತುಕತೆ ನಡೆಸುವುದು ಸಾಧ್ಯವಾಗುತ್ತದೆ. ಇದು Siri ಈಗಾಗಲೇ ಎದುರಿಸುತ್ತಿದ್ದ ದೊಡ್ಡ ಸವಾಲುಗಳಿಗೆ ಉತ್ತರವಾಗಲಿದೆ.

Apple ಕಂಪನಿಯ ತನ್ನ ಹೊಸ Siri ಆವೃತ್ತಿಯನ್ನು ಜೂನ್‌ನಲ್ಲಿ ನಡೆಯುವ WWDC – ವರ್ಲ್ಡ್‌ವೈಡ್ ಡೆವಲಪರ್ಸ್ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಪರಿಚಯಿಸುವ ಸಾಧ್ಯತೆಗಳು ಅಧಿಕ ಇವೆ. ಆ ಬಳಿಕ ಸೆಪ್ಟೆಂಬರ್‌ನಲ್ಲಿ ಆಪಲ್‌ನ ವಾರ್ಷಿಕ ಸಾಫ್ಟ್‌ವೇರ್ ಅಪ್‌ಡೇಟ್‌ಗಳ ಜೊತೆಗೆ ಬಳಕೆದಾರರಿಗೆ ಹೊಸ Siri ಆವೃತ್ತಿ ಲಭ್ಯವಾಗಲಿದೆ ಎನ್ನಲಾಗಿದೆ. ಇನ್ನು ಸಂಸ್ಥೆಯು iOS 26 ನಲ್ಲಿ Siri ಮತ್ತು Apple Intelligence ಗೆ ಕೆಲವು ಅಪ್‌ಡೇಟ್‌ಗಳನ್ನು ನೀಡಲಿದೆ. ಆದರೆ ಸಂಪೂರ್ಣ ಚಾಟ್‌ಬಾಟ್ ಆವೃತ್ತಿಯನ್ನು iOS 27 ರಲ್ಲಿ ನಿರೀಕ್ಷಿಸಬಹುದಾಗಿದೆ.

ಕಳೆದ ಕೆಲವು ವರ್ಷದಿಂದ OpenAI, Google ಸೇರಿದಂತೆ ಕೆಲವು ಸಂಸ್ಥೆಗಳ AI ಚಾಟ್‌ಬಾಟ್‌ಗಳು ಸಖತ್ ಸದ್ದು ಮಾಡಿವೆ. ಆದರೆ AI ರೇಸ್‌ನಲ್ಲಿ ಆಪಲ್ ಹಿಂದೆ ಉಳಿದಿದೆ ಎನ್ನುವುದು ಈಗ ಎಲ್ಲರಿಗೂ ಗೊತ್ತಿರುವ ವಿಷಯ. ಹೆಚ್ಚು ವೈಯಕ್ತಿಕ ಅನುಭವ ನೀಡುವ Siri ಆವೃತ್ತಿಯನ್ನು ಅನ್ನು ಪರಿಚಯಿಸುವುದನ್ನು ಸಂಸ್ಥೆಯು ಹಲವು ಬಾರಿ ಮುಂದೂಡಿತ್ತು. ಈ ನಡುವೆ ಕಳೆದ ವರ್ಷ Apple ಕಂಪನಿ ತನ್ನ AI ಸಾಮರ್ಥ್ಯವನ್ನು ಹೆಚ್ಚಿಸಲು OpenAI ಮತ್ತು Anthropic ಸೇರಿದಂತೆ ಹಲವು ಕಂಪನಿಗಳ ತಂತ್ರಜ್ಞಾನಗಳನ್ನು ಪರೀಕ್ಷಿಸುತ್ತಾ ಸೂಕ್ತ AI ಪಾಲುದಾರರನ್ನು ಸರ್ಚ್ ಮಾಡುವುದರಲ್ಲಿ ಸಮಯ ವ್ಯಯಿಸಿತು. ಕೊನೆಗೆ ಗೂಗಲ್‌ ಕಂಪನಿಯ Gemini AI ಯನ್ನು ಆಯ್ಕೆ ಮಾಡಿಕೊಂಡಿದ್ದು ಈ ಪಾಲುದಾರಿಕೆಯನ್ನು ಆಪಲ್ ಮತ್ತು ಗೂಗಲ್ ಸಂಸ್ಥೆಗಳು ಅಧಿಕೃತವಾಗಿ ದೃಢಪಡಿಸಿವೆ. ಈ ಬೆಳವಣಿಗೆ ಆಪಲ್ ತನ್ನ AI ತಂತ್ರವನ್ನು ಹೊಸ ಹಂತಕ್ಕೆ ಕೊಂಡೊಯ್ಯಲು ತೆಗೆದುಕೊಂಡ ಮಹತ್ವದ ಹೆಜ್ಜೆ ಎಂದು ಹೇಳಬಹುದು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries