HEALTH TIPS

ವಿಮಾನ ಅಪಘಾತವನ್ನು ರಾಜಕೀಯಗೊಳಿಸಬೇಡಿ: ಶರದ್‌ ಪವಾರ್‌

ಪುಣೆ: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್‌ ಮತ್ತು ಇತರ ನಾಲ್ವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದನ್ನು ರಾಜಕೀಯಗೊಳಿಸಬಾರದು ಎಂದು ಅಜಿತ್‌ ಅವರ ದೊಡ್ಡಪ್ಪ, ಎನ್‌ಸಿಪಿ (ಎಸ್‌ಪಿ) ಮುಖ್ಯಸ್ಥ ಶರದ್‌ ಪವಾರ್‌ ಮನವಿ ಮಾಡಿದರು. 

ಈ ಮೂಲಕ ಅವರು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಹೇಳಿಕೆಯನ್ನು ಟೀಕಿಸಿದ್ದಾರೆ.

'ಅಜಿತ್‌ ಸಾವು ಮಹಾರಾಷ್ಟ್ರಕ್ಕೆ ದೊಡ್ಡ ಆಘಾತ ತರಿಸಿದೆ. ಕಠಿಣ ಪರಿಶ್ರಮಿ, ದಕ್ಷ ನಾಯಕನನ್ನು ರಾಜ್ಯ ಕಳೆದುಕೊಂಡಿದ್ದು, ತುಂಬಲಾರದ ನಷ್ವವಾಗಿದೆ. ಎಲ್ಲವೂ ನಮ್ಮ ಕೈಯಲ್ಲಿಲ್ಲ' ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

'ಇದೊಂದು ಅಪಘಾತ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅನಗತ್ಯವಾಗಿ ರಾಜಕೀಯ ತರಬೇಡಿ ಎಂದು ನಾನು ಮಮತಾ ಅವರಲ್ಲಿ ವಿನಂತಿಸುತ್ತೇನೆ' ಎಂದು ಅವರು ಪ್ರತಿಕ್ರಿಯಿಸಿದರು.

'ಬಹುತೇಕ ಸಂಸ್ಥೆಗಳು ಪೂರ್ಣವಾಗಿ ರಾಜಿ ಮಾಡಿಕೊಂಡಿರುವ ಕಾರಣ, ಅಜಿತ್‌ ಸಾವಿನ ಬಗ್ಗೆ ಸುಪ್ರೀಂ ಕೋರ್ಟ್‌ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು' ಎಂದು ಮಮತಾ ಪ್ರತಿಪಾದಿಸಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries