ಕಾಸರಗೋಡು: ನವಕೇರಳ ನಾಗರಿಕರ ಪ್ರತಿಕ್ರಿಯೆ ಕಾರ್ಯಕ್ರಮದ ಅಭಿವೃದ್ಧಿ ಮತ್ತು ಕಲ್ಯಾಣ ಅಧ್ಯಯನ ಕಾರ್ಯಕ್ರಮದ ಭಾಗವಾಗಿ, ಕಾಸರಗೋಡು ಕ್ಷೇತ್ರದ ವ್ಯಾಪ್ತಿಯ ಮೊಗ್ರಾಲ್ ಪುತ್ತೂರು, ಮಧೂರು, ಬದಿಯಡ್ಕ ಮತ್ತು ಇತರ ಪಂಚಾಯತ್‍ಗಳ ಕ್ರಿಯಾಸೇನೆಯ ಸದಸ್ಯರಿಗೆ ಕಲೆಕ್ಟರೇಟ್ ಮಿನಿ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು. ಮಂಜೇಶ್ವರ ಕ್ಷೇತ್ರದ ಉಸ್ತುವಾರಿ ಹೊಂದಿರುವ ಕುಟುಂಬಶ್ರೀ ಜಿಲ್ಲಾ ಮಿಷನ್ ಸಂಯೋಜಕ ಕೆ. ರತೀಶ್ ಕುಮಾರ್ ಅವರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕುಟುಂಬಶ್ರೀ ಸಹಾಯಕ ಜಿಲ್ಲಾ ಮಿಷನ್ ಸಂಯೋಜಕ ಸಿ.ಎಚ್. ಇಕ್ಬಾಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಮಾಹಿತಿ ಅಧಿಕಾರಿ ಎಂ. ಮಧುಸೂಧನನ್, ನವಕೇರಳ ನಾಗರಿಕರ ಪ್ರತಿಕ್ರಿಯೆ ಕಾರ್ಯಕ್ರಮದ ಜಿಲ್ಲಾ ಸಂಚಾಲಕರು ಪ್ರಾಸ್ತಾವಿಕವಾಗಿ ಮಾತನಾಡಿದರು. ನವಕೇರಳ ಕ್ರಿಯಾ ಯೋಜನೆಯ ಜಿಲ್ಲಾ ಸಂಯೋಜಕ ಕೆ. ಬಾಲಕೃಷ್ಣನ್, ನಾಗರಿಕರ ಪ್ರತಿಕ್ರಿಯೆ ಕಾರ್ಯಕ್ರಮದ ಕ್ಷೇತ್ರದ ಉಸ್ತುವಾರಿ ಹೊಂದಿರುವ ತಾಲ್ಲೂಕು ಸಹಕಾರಿ ಸಹಾಯಕ ನಿಬಂಧಕ ಎ. ರವೀಂದ್ರ, ಕೆ. ನಾಗೇಶ್, ಸಹಾಯಕ ಜಿಲ್ಲಾ ಮಿಷನ್ ಸಂಯೋಜಕ ಸಿ.ಎಂ. ಸೌದಾ ಮಾತನಾಡಿದರು. ನವಕೇರಳ ಸಂಪನ್ಮೂಲ ವ್ಯಕ್ತಿ ಲೆಕ್ಕಪರಿಶೋಧನಾ ವಿಭಾಗದ ಮಾಜಿ ಜಂಟಿ ನಿರ್ದೇಶಕ ಸಿ.ಎಚ್.ರಾಜಾರಾಮ, ಕಿಲಾ ತಾಂತ್ರಿಕ ತಜ್ಞ ಎಂ. ಶ್ರೀಶ್ಮಾ ತರಗತಿಗಳನ್ನು ನಡೆಸಿಕೊಟ್ಟರು.



