ಕೊಟ್ಟಾಯಂ: ಎರುಮೇಲಿಯಲ್ಲಿ ನೈರ್ಮಲ್ಯ ಕಾರ್ಮಿಕರಿಗೆ ವೇತನ ನೀಡಲಾಗಿಲ್ಲ ಎಂದು ವಿರೋಧಿಸಿ ದೇವಸ್ಥಾನದ ಮುಂದೆ ಕುಳಿತು ಕಾರ್ಮಿಕರು ನಿನ್ನೆ ಪ್ರತಿಭಟನೆ ನಡೆಸಿದರು. 125 ಕಾರ್ಮಿಕರಿಗೆ ತಲಾ 19,500 ರೂ. ವೇತನ ನೀಡಬೇಕಾಗಿದೆ. ದೇವಸ್ವಂ ಮಂಡಳಿ ಹಣ ಪಾವತಿಸಬೇಕು. ಪತ್ತನಂತಿಟ್ಟ ಜಿಲ್ಲಾಧಿಕಾರಿ ಹಣವನ್ನು ಕೊಟ್ಟಾಯಂ ಕಲೆಕ್ಟರೇಟ್‍ಗೆ ವರ್ಗಾಯಿಸಿದ್ದಾರೆ ಎನ್ನಲಾಗಿದೆ.
ಅವರು 35 ದಿನಗಳ ವೇತನ ಬಾಕಿ ಉಳಿಸಿಕೊಂಡಿದ್ದಾರೆ. ಕಷ್ಟಪಟ್ಟು ಕೆಲಸ ಮಾಡಿದ ಕಾರ್ಮಿಕರಿಗೆ ದೇವಸ್ವಂ ಮಂಡಳಿ ಒಂದು ರೂಪಾಯಿ ಕೂಡ ಪಾವತಿಸಲು ಸಿದ್ಧವಿಲ್ಲ ಎಂದು ಕಾರ್ಮಿಕರು ಹೇಳುತ್ತಾರೆ. ಹಣವಿಲ್ಲದೆ ನಾವು ಮನೆಗೆ ಹೇಗೆ ತೆರಳುವುದು ಎಂದು ಅವರು ಕೇಳುತ್ತಿದ್ದಾರೆ. ಅವರು ತಮಿಳುನಾಡು ಮೂಲದ ಕಾರ್ಮಿಕರಾಗಿದ್ದು, ನಿರ್ಲಕ್ಷ್ಯ ಸ್ಪಷ್ಟವಾಗಿದೆ.
ಕೋಟ್ಯಂತರ ಮೌಲ್ಯದ ಚಿನ್ನವನ್ನು ಕಳವುಗೈದು ಇನ್ನಿಲ್ಲದ ರೀತಿಯಲ್ಲಿ ಆರೋಪ-ಪ್ರತ್ಯಾರೋಪಗಳಲ್ಲಿ ಮುಳುಗಿರುವ ರಾಜಕೀಯ ಫುಡಾರಿಗಳಿಗೆ ಕಾರ್ಮಿಕರ ವೇತನ ಕ್ಲಪ್ತ ವೇಳೆಗೆ ನೀಡಲಾಗದಿರುವುದು ಕಾಲದ ಮಹಿಮೆ ಅಥವಾ ಅಹಂಕಾರದ ದುರಾಡಳಿತದ ಪರಮಾವಧಿ ಎನ್ನೋಣವೇ?

