HEALTH TIPS

ದೇಶದಲ್ಲಿ ವ್ಯಾಘ್ರಗಳ ಸಾವಿನ ಸಂಖ್ಯೆಯಲ್ಲಿ ಏರಿಕೆ

ಭೋಪಾಲ್: ಜಗತ್ತಿನಲ್ಲಿ ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ಭಾರತದಲ್ಲಿ 2025ರಲ್ಲಿ ಬರೋಬ್ಬರಿ 166 ಹುಲಿಗಳು ಸಾವಿಗೀಡಾಗಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ (ಎನ್‌ಟಿಸಿಎ) ಇತ್ತೀಚಿನ ವರದಿ ಹೇಳಿದೆ. 

2024 ಹುಲಿಗಳ ಸಾವಿನ ಪ್ರಮಾಣಕ್ಕೆ ಹೋಲಿಸಿದರೆ, 2025ರಲ್ಲಿ 40 ಹುಲಿಗಳಿಗೂ ಅಧಿಕ ಸಾವಿಗೀಡಾಗಿವೆ.

2024ರಲ್ಲಿ ಇದರ ಸಂಖ್ಯೆ 126 ಇತ್ತು. ಭಾರತದ 'ಹುಲಿಗಳ ರಾಜ್ಯ' ಎಂದು ಕರೆಯಲ್ಪಡುವ ಮಧ್ಯಪ್ರದೇಶವೊಂದರಲ್ಲೇ ಅತೀ ಹೆಚ್ಚು (55) ಹುಲಿಗಳು ಸಾವಿಗೀಡಾಗಿವೆ. ಮಹಾರಾಷ್ಟ್ರ, ಕೇರಳ ಮತ್ತು ಅಸ್ಸಾಂ ರಾಜ್ಯಗಳಲ್ಲಿ ನಂತರದ ಸ್ಥಾನದಲ್ಲಿದ್ದು, ಕ್ರಮವಾಗಿ 38, 13 ಮತ್ತು 12 ಹುಲಿಗಳು ಸಾವಿಗೀಡಾಗಿವೆ.

ಸಾವಿಗೀಡಾಗಿರುವ 166 ಹುಲಿಗಳ ಪೈಕಿ 31 ಮರಿಗಳು ಇರುವುದು ಕಳವಳಕಾರಿ ಅಂಶವಾಗಿದೆ.

ಹುಲಿಗಳ ಸಾವಿಗೆ ಪ್ರಮುಖ ಕಾರಣ, ಸ್ಥಳಾವಕಾಶದ ಕೊರತೆಯಿಂದ ಉಂಟಾಗಿರುವ ಪ್ರಾದೇಶಿಕ ಸಂಘರ್ಷ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಹಾರ ಸರಪಳಿಯ ಹೊಂದಾಣಿಕೆಯಲ್ಲಿ ಹುಲಿಗಳ ಪಾತ್ರ ಮಹತ್ವದ್ದಾಗಿದೆ. 2024ರಲ್ಲಿ 126 ಹುಲಿಗಳು ಸಾವಿಗೀಡಾಗಿದ್ದವು. ಈ ಅಂಕಿಅಂಶಗಳಿಗೆ ಹೋಲಿಸಿದರೆ 2025ರಲ್ಲಿ ಗಣನೀಯ ಏರಿಕೆ ಕಂಡಿದೆ.

2025ರ ಜನವರಿ 2ರಂದು ಮಹಾರಾಷ್ಟ್ರದ ಬ್ರಹ್ಮಪುರಿ ಅರಣ್ಯ ವಿಭಾಗದಲ್ಲಿ ಮೊದಲ ಹುಲಿ ಸಾವು ಪ್ರಕರಣ ವರದಿಯಾಗಿತ್ತು. ಅಲ್ಲಿ ವಯಸ್ಕ ಗಂಡು ಹುಲಿ ಸಾವಿಗೀಡಾಗಿತ್ತು. ಇದಾದ ಮೂರು ದಿನಗಳ ಬಳಿಕ ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಅಭಯಾರಣ್ಯದೊಳಗೆ ಹೆಣ್ಣು ಹುಲಿ ಸಾವಿಗೀಡಾಗಿತ್ತು. ಎನ್‌ಟಿಸಿಎ ದತ್ತಾಂಶದ ಪ್ರಕಾರ, ಡಿಸೆಂಬರ್ 28ರಂದು ಮಧ್ಯಪ್ರದೇಶದ ಉತ್ತರ ಸಾಗರ್‌ನಲ್ಲಿ 2025ರ ಕೊನೆಯ ಹುಲಿ ಸಾವಿನ ವರದಿಯಾಗಿದೆ.

ವನ್ಯಜೀವಿ ತಜ್ಞ ಜೈರಾಮ್ ಶುಕ್ಲಾ ಪ್ರಕಾರ, 'ದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣ, ಅವುಗಳ ಪ್ರಾದೇಶಿಕ ಒಳಜಗಳ ಹಾಗೂ ಹುಲಿಗಳ ಸಂಖ್ಯೆಯಲ್ಲಿ ಹಣನೀಯ ಏರಿಕೆ ಕಂಡಿರುವುದು. ಮಧ್ಯಪ್ರದೇಶವೊಂದರಲ್ಲೇ 2014 ರಿಂದ ಈಚೆಗೆ ಸುಮಾರು 60 ಪ್ರತಿಶತದಷ್ಟು ಹುಲಿಗಳ ಸಂಖ್ಯೆ ಹೆಚ್ಚಳವಾಗಿದೆ' ಎಂದು ಅವರು ತಿಳಿಸಿದ್ದಾರೆ.

'ಹುಲಿಗಳ ಬೆಳವಣಿಗೆ ಪ್ರಮಾಣ ಗಮನಿಸಿದರೆ, ಅದು ಅಭೂತಪೂರ್ವವಾಗಿದೆ ಎನ್ನಬಹುದು. ಆದರೆ, ಅವುಗಳಿಗೆ ನೆಲೆ ಎಲ್ಲಿದೆ? ಸದ್ಯ, ಹುಲಿಗಳು ತಮ್ಮ ಜಾಗಕ್ಕಾಗಿ ಹೋರಾಡಿ ಪ್ರಾಣ ಕಳೆದುಕೊಳ್ಳುತ್ತಿವೆ. ಮಧ್ಯಪ್ರದೇಶದಲ್ಲಿ ಅವುಗಳ ಸಾವಿನ ಸಂಖ್ಯೆ ತೀವ್ರವಾಗಿ ಬೆಳೆದಿದೆ' ಎಂದು ಅವರು ಹೇಳಿದರು.

2023ರಲ್ಲಿ ಬಿಡುಗಡೆಯಾದ ಕೊನೆಯ ಅಧಿಕೃತ ಮಾಹಿತಿಯ ಪ್ರಕಾರ, 2018ರಲ್ಲಿ 2,967 ಇದ್ದ ಹುಲಿಗಳ ಸಂಖ್ಯೆ 2022ರ ವೇಳೆಗೆ 3,682ಕ್ಕೆ ತಲುಪಿದೆ. ಇದು ವಾರ್ಷಿಕವಾಗಿ ಸುಮಾರು ಶೇ 6 ರಷ್ಟು ಹೆಚ್ಚಳವನ್ನು ಸೂಚಿಸುತ್ತದೆ. ವಿಶ್ವದ ಒಟ್ಟಾರೆ ಹುಲಿಗಳ ಸಂಖ್ಯೆಯಲ್ಲಿ ಭಾರತದಲ್ಲಿ ಸುಮಾರು ಶೇ 75 ರಷ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

'ಮಧ್ಯಪ್ರದೇಶವು ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯವಾಗಿದೆ. ಇದು ಆ ರಾಜ್ಯದಲ್ಲಿ ಹುಲಿಗಳ ಸಾವಿನ ಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದೆ' ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಭರಂಜನ್ ಸೇನ್ ತಿಳಿಸಿದರು.

'ನಮ್ಮ ಇಲಾಖೆಯು ಪ್ರತಿಯೊಂದು ಹುಲಿ ಸಾವಿನ ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡು ಪತ್ತೆ ಹಚ್ಚುತ್ತದೆ ಮತ್ತು ಪ್ರತಿಯೊಂದು ಪ್ರಕರಣವನ್ನು ತನಿಖೆ ಮಾಡಲು ಪ್ರಾಮಾಣಿ ಪ್ರಯತ್ನ ಮಾಡುತ್ತದೆ. ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ಬೇಟೆಯಾಡಿದ ಪ್ರಕರಣಗಳಲ್ಲಿ, ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಹುಲಿಗಳನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ನಾವು ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ' ಎಂದು ಅವರು ತಿಳಿಸಿದ್ದಾರೆ.

ಮಧ್ಯಪ್ರದೇಶ ಪರಿಣಾಮಕಾರಿಯಾದ ರಾಜ್ಯ ಹುಲಿ ದಾಳಿ ಪಡೆ (STSF)ಯನ್ನು ಹೊಂದಿದೆ. ಇದು ಇಂಟರ್‌ಪೋಲ್ ರೆಡ್ ಕಾರ್ನರ್ ನೋಟಿಸ್‌ಗಳಿಗೆ ಸಂಬಂಧಿಸಿದ ಪ್ರಕರಣಗಳು ಸೇರಿದಂತೆ ವನ್ಯಜೀವಿ ಹತ್ಯೆಯ ಅಪರಾಧಗಳ ವಿರುದ್ಧ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಮಧ್ಯಪ್ರದೇಶದಲ್ಲಿ 2014ರಲ್ಲಿ 308 ಹುಲಿಗಳಿದ್ದವು , 2018ರಲ್ಲಿ ಈ ಸಂಖ್ಯೆ 526ಕ್ಕೆ ಏರಿಕೆಯಾಯಿತು ಮತ್ತು 2022 ರ ವೇಳೆಗೆ 785 ಕ್ಕೆ ಏರಿದೆ ಎಂದು ಸೇನ್ ಹೇಳಿದರು

ಅಧಿಕೃತ ಮಾಹಿತಿಯ ಪ್ರಕಾರ, ಮಧ್ಯಪ್ರದೇಶದಲ್ಲಿ 2023 ರಲ್ಲಿ 44 ಹುಲಿಗಳು ಸಾವಿಗೀಡಾಗಿದ್ದರೆ, 2024ರಲ್ಲಿ 44 ಮತ್ತು 2025ರಲ್ಲಿ 55 ಹುಲಿಗಳ ಸಾವಿನ ಪ್ರಕರಣ ದಾಖಲಾಗಿದೆ. ಇವುಗಳಲ್ಲಿ 38ಕ್ಕೂ ಹೆಚ್ಚು ಸಾವುಗಳು ನೈಸರ್ಗಿಕ ಕಾರಣಗಳಿಂದ ಸಂಭವಿಸಿವೆ. 10 ಸಾವುಗಳು ಮಾತ್ರ ಬೇಟೆಯಾಡುವುದರಿಂದ ಸಂಭವಿಸಿವೆ ಎಂದು ದತ್ತಾಂಶ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries