ನವದೆಹಲಿ: ಭಯೋತ್ಪಾದನೆ ಬಗ್ಗೆ 'ಶೂನ್ಯ ಸಹಿಷ್ಣುತೆ' ಪಾಲಿಸಬೇಕು ಮತ್ತು ಭಾರತದ ನೆರೆಯ ದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳ ಮೂಲಸೌಕರ್ಯದ ಉತ್ತೇಜನಕ್ಕೆ ಸಹಾಯ ಮಾಡಬಾರದು ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪೋಲೆಂಡ್ ವಿದೇಶಾಂಗ ಸಚಿವ ರಾಡೋಸ್ಲಾವ್ ಸಿರ್ಕೋರ್ಸ್ಕಿಗೆ ಸೋಮವಾರ ಹೇಳಿದ್ದಾರೆ.
ಪೋಲೆಂಡ್-ಪಾಕಿಸ್ತಾನ ಅಕ್ಟೋಬರ್‌ನಲ್ಲಿ ನೀಡಿದ್ದ ಜಂಟಿ ಹೇಳಿಕೆಯಲ್ಲಿ ಕಾಶ್ಮೀರದ ಬಗ್ಗೆ ಉಲ್ಲೇಖಸಿದ್ದಕ್ಕೆ ಸಂಬಂಧಿಸಿ ಅವರು ಈ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
ಅಲ್ಲದೆ, ಉಕ್ರೇನ್ ಸಂಘರ್ಷದ ವಿಷಯದಲ್ಲಿ ಭಾರತವನ್ನು ಗುರಿಯಾಗಿಸುತ್ತಿರುವ ಬಗ್ಗೆಯೂ ಜೈಶಂಕರ್ ಅವರು ಪೋಲೆಂಡ್‌ನ ಉಪ ಪ್ರಧಾನಿಯೂ ಆಗಿರುವ ಸಕೋರ್ಸ್ಕಿ ಅವರೊಂದಿಗೆ ನಡೆದ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೈಶಂಕರ್ ಅವರ ಈ ಅಭಿಪ್ರಾಯವನ್ನು ಸಂಪೂರ್ಣವಾಗಿ ಒಪ್ಪುತ್ತೇನೆ ಎಂದು ಸಿಕೋರ್ಸ್ಕಿ ಹೇಳಿದ್ದಾರೆ.
ಸಿಕೋರ್ಸ್ಕಿ ಮೂರು ದಿನಗಳ ಭಾರತ ಪ್ರವಾಸದಲ್ಲಿದ್ದಾರೆ. ಐರೋಪ್ಯ ಒಕ್ಕೂಟದ ಉನ್ನತ ನಾಯಕರು ಭಾರತಕ್ಕೆ ಭೇಟಿ ನೀಡುವ 10 ದಿನಗಳ ಮೊದಲು ಅವರು ಈ ಪ್ರವಾಸ ಕೈಗೊಂಡಿದ್ದಾರೆ.

