ತಿರುವನಂತಪುರಂ(PTI): ಶಬರಿಮಲೆ ಚಿನ್ನದ ಕಳ್ಳತನಕ್ಕೆ ಸಂಬಂಧಿಸಿದಂತೆ ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮನೆ ಮೇಲೆ ದಾಳಿ ಮಾಡಿ ಅವರನ್ನು ಬಂಧಿಸಲು ಸಚಿವ ವಿ. ಶಿವನ್ ಕುಟ್ಟಿ ಒತ್ತಾಯಿಸಿದ್ದಾರೆ. ಶಬರಿಮಲೆ ವಿಷಯದ ಕುರಿತು ವಿಧಾನಸಭೆಯಲ್ಲಿ ವಿರೋಧ ಪಕ್ಷವು ಪ್ರತಿಭಟನೆ ನಡೆಸಿದಾಗ ಸಚಿವ ಶಿವನ್ ಕುಟ್ಟಿ ಹೀಗೆ ಪ್ರತಿಕ್ರಿಯಿಸಿದರು.
'ವಿರೋಧ ಪಕ್ಷವು ಸೋನಿಯಾ ಗಾಂಧಿ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಸೋನಿಯಾ ಗಾಂಧಿಯನ್ನು ಬಂಧಿಸಿ ಪ್ರಶ್ನಿಸಬೇಕು. ಸೋನಿಯಾ ಗಾಂಧಿಯವರ ಮನೆ ಮೇಲೆ ದಾಳಿ ಮಾಡಬೇಕು. ಸೋನಿಯಾ ಮನೆಯಲ್ಲಿ ಚಿನ್ನವಿದೆ' ಎಂದು ಶಿವನ್ ಕುಟ್ಟಿ ಹೇಳಿದರು.
ಪೋತ್ತಿ ಸೋನಿಯಾ ಅವರ ಮನೆಗೆ ಎರಡು ಬಾರಿ ಹೋಗಿದ್ದಾರೆ. ಅವರು ಸೋನಿಯಾ ಕೈಗೆ ಚಿನ್ನ ಕಟ್ಟಿದ್ದರು. ಚಿನ್ನ ಎಲ್ಲಿಂದ ಬಂತು ಎಂದು ಹೇಳಬೇಕು ಎಂದು ಶಿವನ್ ಕುಟ್ಟಿ ಹೇಳಿದರು. ವಿಧಾನಸಭೆಯಲ್ಲಿ ವಿರೋಧ ಪಕ್ಷವು "ಪೆÇತ್ತಿಯೇ ಕೇಟ್ಟಿಯೆ" ಎಂದು ಹಾಡಿದಾಗ, ಶಿವನ್‍ಕುಟ್ಟಿ ನೇತೃತ್ವದ ಆಡಳಿತ ಪಕ್ಷವು "ಅಯ್ಯಪ್ಪಾ, ಚಿನ್ನ ಮಾರಿದ್ದು ಕಾಂಗ್ರೆಸ್" ಎಂದು ಪ್ರತಿಯಾಗಿ ಹಾಡಿತು.
ಪೋತ್ತಿಯನ್ನು ಸೋನಿಯಾ ಬಳಿ ಎರಡು ಬಾರಿ ಏಕೆ ಕರೆದೊಯ್ಯಲಾಯಿತು ಮತ್ತು ಯಾರು ಕರೆದೊಯ್ದವರು ಎಂದು ಶಿವನ್‍ಕುಟ್ಟಿ ಕೇಳಿದರು.

