HEALTH TIPS

ಮಾಜಿ ಯೋಧರನ್ನು ತೊಡಗಿಸಿಕೊಳ್ಳಲಾಗುತ್ತಿದೆ: ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ

ಜೈಪುರ: ಸೇನೆಯು ತನ್ನ ನಿವೃತ್ತ ಸೈನಿಕರನ್ನು ದೇಶದ ಭದ್ರತಾ ಚೌಕಟ್ಟಿನಲ್ಲಿ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಬುಧವಾರ ಹೇಳಿದ್ದಾರೆ. ಅಲ್ಲದೆ, ಮಾಜಿ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಕಲ್ಯಾಣ, ಆರೋಗ್ಯ ಮತ್ತು ಪುರ್ನವಸತಿ ಉಪಕ್ರಮಗಳನ್ನು ವಿಸ್ತರಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸಶಸ್ತ್ರ ಪಡೆಗಳ ಮಾಜಿ ಸೈನಿಕರ ದಿನಾಚರಣೆಯ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. 1953ರ ಈ ದಿನ ನಿವೃತ್ತರಾದ ಸಶಸ್ತ್ರ ಪಡೆಗಳ ಮೊದಲ ಕಮಾಂಡರ್ ಇನ್ ಚೀಫ್ ಫೀಲ್ಡ್‌ ಮಾರ್ಷಲ್ ಕೆ.ಎಂ‌. ಕಾರ್ಯಪ್ಪ ಅವರ ಸ್ಮರಣೆಗಾಗಿ ಪ್ರತಿವರ್ಷ ಜನವರಿ 14ರಂದು ಸಶಸ್ತ್ರ ಪಡೆಗಳ ಮಾಜಿ ಸೈನಿಕರ ದಿನಾಚರಣೆಯನ್ನು ಆಚರಿಸಲಾಗುತ್ತದೆ.

'ಮಾಜಿ ಸೈನಿಕರು ಸಕ್ರಿಯ ಸೇವೆಗಿಂತ ಹೆಚ್ಚಾಗಿ ಭಾರತದ ಭದ್ರತೆ, ಆಡಳಿತ, ಕೈಗಾರಿಕೆ ಮತ್ತು ಸಾಮಾಜಿಕ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಕರೆದಾಗಲೆಲ್ಲಾ ನಮ್ಮ ಯೋಧರು ದೇಶದೊಂದಿಗೆ ದೃಢವಾಗಿ ನಿಂತಿದ್ದಾರೆ. ಇದು ಅವರಲ್ಲಿ ಆಳವಾಗಿ ಬೇರೂರಿರುವ ರಾಷ್ಟ್ರೀಯ ಕರ್ತವ್ಯ ಮತ್ತು ಜವಾಬ್ದಾರಿಯ ಪ್ರಜ್ಞೆಯ ಪ್ರತಿಬಿಂಬ' ಎಂದು ಉಪೇಂದ್ರ ಅವರು ಬಣ್ಣಿಸಿದ್ದಾರೆ.

ಸೇನೆಯನ್ನು ವಿಸ್ತರಿಸುತ್ತಿರುವ ಕಲ್ಯಾಣ ಯೋಜನೆ ವ್ಯವಸ್ಥೆಯ‌ನ್ನು ಉಲ್ಲೇಖಿಸಿದ ಅವರು, ರಕ್ಷಣಾ ಪಿಂಚಣಿದಾರರು ಮತ್ತು ಅವರ ಕುಟುಂಬಗಳಿಗೆ ಮೀಸಲಾದ ಬೆಂಬಲ ವ್ಯವಸ್ಥೆಯನ್ನು ಒದಗಿಸಲು 2024ರ ಆಗಸ್ಟ್‌ನಲ್ಲಿ ಪ್ರಾರಂಭಿಸಲಾದ ಪ್ರಾಜೆಕ್ಟ್‌ ನಮನ್ ಒಂದು ಮೈಲಿಗಲ್ಲಾಗಿದೆ' ಎಂದು ಹೇಳಿದ್ದಾರೆ.

ಆಪರೇಷನ್ ಸಿಂಧೂರದಲ್ಲಿ ನಿವೃತ್ತ ಸೈನಿಕರ ಪಾಲ್ಗೊಳ್ಳುವಿಕೆಯನ್ನು ಅವರು ಇದೇ ವೇಳೆ ನೆನಪಿಸಿಕೊಂಡಿದ್ದಾರೆ.

'ಆಪೇಷನ್ ಸಿಂಧೂರ ದೃಢಸಂಕಲ್ಪದ ಸಂಕೇತ'

ಆಪರೇಷನ್ ಸಿಂಧೂರವು ಭಾರತದ ದೃಢಸಂಕಲ್ಪ ಮತ್ತು ಸಂಯಮದ ಪ್ರದರ್ಶನವಾಗಿದೆ ಎಂದು ಉಪೇಂದ್ರ ದ್ವಿವೇದಿ ಬುಧವಾರ ಇಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ಕೆಡೆಟ್ ಕೋರ್‌ನ (ಎನ್‌ಸಿಸಿ) ಗಣರಾಜ್ಯೋತ್ಸವ ಶಿಬಿರದಲ್ಲಿ ಕೆಡೆಟ್‌ಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು ಆಪರೇಷನ್ ಸಿಂಧೂರ ದೇಶದ ಸಶಸ್ತ್ರ ಪಡೆಗಳು ಮತ್ತು ಯುವಕರ ನೈತಿಕ ಶಕ್ತಿಯ ಹಾಗೂ ವೃತ್ತಿಪರ ಬದ್ಧತೆಯ ಪ್ರತಿಬಿಂಬವಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಜನರಲ್ ಉಪೇಂದ್ರ ದ್ವಿವೇದಿ, ಸೇನಾ ಮುಖ್ಯಸ್ಥನಿವೃತ್ತ ಯೋಧ ಮತ್ತು ಅವರ ಕುಟುಂಬವನ್ನು ಸೇನೆಯು ದೊಡ್ಡ ಘಟಕವಾಗಿ ನೋಡುತ್ತದೆ. ನಮ್ಮದು ಸುಮಾರು 1.25 ಕೋಟಿ ಸದಸ್ಯರನ್ನು ಹೊಂದಿರು ಬಲಿಷ್ಠ ಕುಟುಂಬ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries