HEALTH TIPS

ಕಾಶ್ಮೀರದ ಎಲ್‌ಒಸಿ ಉದ್ದಕ್ಕೂ ಪಾಕ್ ಡ್ರೋನ್‌ಗಳಿಗೆ 'ಗುಂಡಿಟ್ಟ' ಭಾರತೀಯ ಸೇನೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಬಳಿ ಭಾರತದ ಭೂಪ್ರದೇಶಕ್ಕೆ ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್‌ಗಳನ್ನು ಭಾರತೀಯ ಭದ್ರತಾಪಡೆಗಳು ಹೊಡೆದುರುಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದಾಗ್ಯೂ, ಕೆಲವು ಡ್ರೋನ್‌ಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ (ಪಿಒಕೆ) ಹಿಂತಿರುಗುವ ಮೊದಲು ಮಂಜಕೋಟ್ ವಲಯದಲ್ಲಿ ಸ್ವಲ್ಪ ಹೊತ್ತು ಹಾರಾಟ ನಡೆಸಿದವು ಎಂದೂ ಅವರು ಹೇಳಿದ್ದಾರೆ.

ಕಳೆದ ಮೂರು ದಿನಗಳಲ್ಲಿ ಜಮ್ಮು ಸೆಕ್ಟರ್‌ನ ಗಡಿ ಪ್ರದೇಶಗಳಲ್ಲಿ ಪಾಕ್‌ನ ಡ್ರೋನ್‌ಗಳು ಹಾರಾಟ ನಡೆಸಿರುವ ಬಗ್ಗೆ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ಗಮನಕ್ಕೆ ತಂದಿದ್ದೇವೆ ಎಂದು ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಹೇಳಿದ್ದಾರೆ.

ಪಾಕ್ ಡ್ರೋನ್‌ಗಳು ಪತ್ತೆಯಾದ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ಎಲ್‌ಒಸಿಯಲ್ಲಿ ಕೃತಕಬುದ್ಧಿಮತ್ತೆ ಆಧಾರಿತ 'ಮಾನವರಹಿತ ವೈಮಾನಿಕ ವಾಹನ' (ಯುಎಎಸ್‌) ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ.

ಮಂಗಳವಾರ ಸಂಜೆ 7 ಗಂಟೆಗೆ ರಾಜೌರಿಯ ಬಳಿ ಭಾರತೀಯ ಭೂಪ್ರದೇಶದ ಮೇಲೆ ಪಾಕ್ ಡ್ರೋನ್‌ಗಳ ಹಾರಾಟವನ್ನು ಗಮನಿಸುತ್ತಿದ್ದಂತೆ ಗುಂಡು ಹಾರಿಸಲಾಗಿತ್ತು. ಬಳಿಕ 7.35ಕ್ಕೆ ಧೇರಿ ಧಾರಾ ಗ್ರಾಮದಲ್ಲಿ ಎರಡು ಡ್ರೋನ್‌ಗಳ ಹಾರಾಟವನ್ನು ಸೇನಾ ಸಿಬ್ಬಂದಿ ಪತ್ತೆಹಚ್ಚಿದ್ದರು. ಬಳಿಕ ಅವುಗಳತ್ತ ಗುಂಡು ಹಾರಿಸಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಜಮ್ಮು-ಕಾಶ್ಮೀರದ ಸಾಂಬಾ, ರಾಜೌರಿ ಮತ್ತು ಪೂಂಛ್‌ ಜಿಲ್ಲೆಗಳಲ್ಲಿನ ಅಂತರರಾಷ್ಟ್ರೀಯ ಗಡಿ (ಐಬಿ) ಹಾಗೂ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಹಲವೆಡೆ ಡ್ರೋನ್‌ಗಳು ಭಾನುವಾರ ಅನುಮಾನಾಸ್ಪದವಾಗಿ ಹಾರಾಟ ನಡೆಸಿದ್ದವು.

ಜನವರಿ 9ರಂದು ಭದ್ರತಾ ಪಡೆಗಳು ಸಾಂಬಾದ ಅಂತರರಾಷ್ಟ್ರೀಯ ಗಡಿಯ ಬಳಿಯ ಘಗ್ವಾಲ್‌ನ ಪಲೂರಾ ಗ್ರಾಮದಲ್ಲಿ ಪಾಕಿಸ್ತಾನದಿಂದ ಡ್ರೋನ್ ಮೂಲಕ ಬೀಳಿಸಲಾದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದವು. ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳಲ್ಲಿ ಎರಡು ಪಿಸ್ತೂಲ್‌ಗಳು, ಮೂರು ಮ್ಯಾಗಜೀನ್‌ಗಳು, 16 ಗುಂಡುಗಳು ಮತ್ತು ಒಂದು ಗ್ರೆನೇಡ್ ಸೇರಿದ್ದವು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries