HEALTH TIPS

ಸೋಮನಾಥ ದೇಗುಲ ಭಾರತೀಯ ನಂಬಿಕೆ, ನಾಗರಿಕತೆಯ ಶಾಶ್ವತ ಸಂಕೇತವಾಗಿದೆ: ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 11ರಂದು ಗುಜರಾತ್​ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಸೋಮನಾಥ ದೇವಾಲಯದಲ್ಲಿ ಜ.8ರಿಂದ 11ರವರೆಗೆ 'ಸೋಮನಾಥ ಸ್ವಾಭಿಮಾನ್ ಪರ್ವ' ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಮೋದಿ ಇದಕ್ಕೆ ಸಾಕ್ಷಿಯಾಗಲಿದ್ದಾರೆ.

ಸೋಮನಾಥ ದೇಗುಲಕ್ಕೆ ಭೇಟಿ ನೀಡುತ್ತಿರುವ ಹಾಗೂ ದೇಗುಲದ ಇತಿಹಾಸದ ಬಗ್ಗೆ ಮೋದಿ ಅವರು ಬ್ಲಾಗ್​ನಲ್ಲಿ ಬರೆದುಕೊಂಡಿದ್ದಾರೆ.

'ಜೈ ಸೋಮನಾಥ!... 2026ನೇ ವರ್ಷವು ನಮ್ಮ ತೀರ್ಥಕ್ಷೇತ್ರವಾದ ಸೋಮನಾಥ ಜ್ಯೋತಿರ್ಲಿಂಗದ ಮೇಲಿನ ಮೊದಲ ದಾಳಿಯ 1000ನೇ ವರ್ಷವನ್ನು ಸೂಚಿಸುತ್ತದೆ. ಪದೇ ಪದೇ ದಾಳಿಗಳ ಹೊರತಾಗಿಯೂ, ಸೋಮನಾಥ ದೇಗಲು ಇಂದಿಗೂ ದೃಢವಾಗಿ ನಿಂತಿದೆ. ಸೋಮನಾಥ ದೇಗುಲ ಭಾರತ ಮಾತೆಯ ಕೋಟ್ಯಂತರ ವೀರ ಪುತ್ರರ ಆತ್ಮಗೌರವ ಮತ್ತು ಅದಮ್ಯ ಧೈರ್ಯದ ಸಂಕೇತವಾಗಿದೆ' ಎಂದು ಮೋದಿ ವಿವರಿಸಿದ್ದಾರೆ.

'1026ರಲ್ಲಿ ಮೊಹಮ್ಮದ್​ ಘಜ್ನಿ ದೇವಾಲಯದ ಮೇಲೆ ದಾಳಿ ಮಾಡಿದ್ದ. ಆದರೆ, ಅವನಿಗೆ ಸೋಮನಾಥನ ಮೇಲಿನ ನಮ್ಮ ಭಕ್ತಿಯನ್ನು ಕಸಿದುಕೊಳ್ಳಲು ಸಾಧ್ಯವಾಗಲಿಲ್ಲ' ಎಂದು ಅವರು ತಿಳಿಸಿದ್ದಾರೆ.

'ಸೋಮನಾಥ ದೇಗುಲವು ಭಾರತೀಯ ನಂಬಿಕೆ ಮತ್ತು ನಾಗರಿಕತೆಯ ಶಾಶ್ವತ ಸಂಕೇತವಾಗಿದೆ. ಈ ದೇವಾಲಯವು ಪದೇ ಪದೇ ವಿದೇಶಿ ಆಕ್ರಮಣಗಳು ಮತ್ತು ವಿನಾಶಗಳನ್ನು ಎದುರಿಸಿದೆ. ಆದರೆ, ಪ್ರತಿ ಬಾರಿಯೂ ಅದನ್ನು ಪುನರ್ನಿರ್ಮಿಸಿ ಅದರ ಪೂರ್ಣ ವೈಭವವನ್ನು ಪುನರುಜ್ಜೀವನಗೊಳಿಸಲಾಗಿದೆ' ಎಂದು ಅವರು ಹೇಳಿದ್ದಾರೆ.

ಸೋಮನಾಥ ದೇವಾಲಯದ 1,000 ವರ್ಷಗಳಷ್ಟು ಹಳೆಯದಾದ ಇತಿಹಾಸವನ್ನು ಮೋದಿ ವಿವರಿಸಿದ್ದಾರೆ. ಜತೆಗೆ, ಪದೇ ಪದೇ ನೆಲಸಮಗೊಂಡು ಮತ್ತೆ ತಲೆ ಎತ್ತಿ ನಿಂತಿರುವ ದೇಗುಲ ಇದಾಗಿದೆ ಎಂದು ಹಾಡಿಹೊಗಳಿದ್ದಾರೆ.

ಗುಜರಾತ್‌ನ ಪ್ರಭಾಸ್ ಪಠಾಣ್‌ನಲ್ಲಿರುವ ಈ ದೇವಾಲಯವು ಹಿಂದೂ ಧರ್ಮದ 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು. ದ್ವಾದಶ ಜ್ಯೋತಿರ್ಲಿಂಗ ಸ್ತೋತ್ರದಲ್ಲಿ ಇದರ ವಿವರಣೆಯು ಸೌರಾಷ್ಟ್ರೇ ಸೋಮನಾಥಂ ಚ... ಈ ಸಾಲಿನಿಂದ ಪ್ರಾರಂಭವಾಗುತ್ತದೆ. ಅಂದರೆ ಸೋಮನಾಥವು ಜ್ಯೋತಿರ್ಲಿಂಗಗಳಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಹೊಂದಿದೆ ಎಂದರ್ಥ.

ಸೋಮನಾಥಕ್ಕೆ ಭೇಟಿ ನೀಡುವುದರಿಂದ ಎಲ್ಲಾ ಪಾಪಗಳಿಂದ ಮುಕ್ತಿ ಸಿಗುತ್ತದೆ ಮತ್ತು ನಮ್ಮ ಆಸೆಗಳು ಈಡೇರಿಸುತ್ತವೆ ಎಂದು ಮೋದಿ ಹೇಳಿದ್ದಾರೆ. ಸೋಮನಾಥ ದೇವಾಲಯವು ಇತಿಹಾಸದುದ್ದಕ್ಕೂ ಹಲವಾರು ವಿನಾಶಗಳನ್ನು ಕಂಡಿದೆ. ಮೊದಲ ಮತ್ತು ಅತ್ಯಂತ ಮಹತ್ವದ ದಾಳಿ 1026ರಲ್ಲಿ ಮೊಹಮ್ಮದ್ ಘಜ್ನಿಯಿಂದ ನಡೆದಿತ್ತು. ಅವನು ದೇವಾಲಯದ ಪವಿತ್ರ ಜ್ಯೋತಿರ್ಲಿಂಗವನ್ನು ನಾಶಪಡಿಸಿ ಅದನ್ನು ಲೂಟಿ ಮಾಡಿದ್ದ ಎಂದು ಮೋದಿ ವಿವರಿಸಿದ್ದಾರೆ.

ಈ ದಾಳಿಗಳು ಕೇವಲ ಧಾರ್ಮಿಕ ಸ್ಥಳಗಳನ್ನು ನಾಶಮಾಡುವ ಗುರಿಯನ್ನು ಹೊಂದಿಲ್ಲ. ಬದಲಾಗಿ, ನಮ್ಮ ಸಮಾಜ ಮತ್ತು ನಾಗರಿಕತೆಯನ್ನು ದುರ್ಬಲಗೊಳಿಸುವ ಗುರಿಯನ್ನು ಹೊಂದಿವೆ. ಪ್ರತಿ ಬಾರಿ ದೇವಾಲಯದ ಮೇಲೆ ದಾಳಿಯಾದಾಗ, ನಮ್ಮ ಪೂರ್ವಜರು ಅದನ್ನು ಪುನರ್ನಿರ್ಮಿಸಿ ಮತ್ತೆ ಜೀವಂತಗೊಳಿಸಿದರು ಎಂದು ಮೋದಿ ಹೇಳಿದ್ದಾರೆ.

ಸೋಮನಾಥ ದೇವಾಲಯವು ಅಪಾರ ಆಧ್ಯಾತ್ಮಿಕ ಮತ್ತು ಆರ್ಥಿಕ ಮಹತ್ವವನ್ನು ಹೊಂದಿತ್ತು. ಈ ದೇವಾಲಯವು ಹೆಚ್ಚಿನ ಸಂಖ್ಯೆಯ ಜನರನ್ನು ಆಕರ್ಷಿಸಿತ್ತು. ಸಮುದ್ರಯಾನ ವ್ಯಾಪಾರಿಗಳು ಮತ್ತು ನಾವಿಕರು ದೇವಾಲಯದ ವೈಭವ ಮತ್ತು ಕಥೆಗಳನ್ನು ಬೇರೆ ದೇಶದವರೊಂದಿಗೆ ಹಂಚಿಕೊಂಡಿದ್ದಾರೆ. ದಾಳಿಗಳ ಹೊರತಾಗಿಯೂ, ಸೋಮನಾಥ ದೇವಾಲಯವು ಕೇವಲ ವಿನಾಶದ ಸಂಕೇತವಲ್ಲ. ಇದು ಭಾರತ ಮಾತೆಯ ಲಕ್ಷಾಂತರ ಮಕ್ಕಳ ಸ್ವಾಭಿಮಾನ ಮತ್ತು ಅಚಲ ನಂಬಿಕೆಯ ಕಥಾವಸ್ತುವಾಗಿದೆ ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.

ಸ್ವಾತಂತ್ರ್ಯ ನಂತರದಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ನೇತೃತ್ವದಲ್ಲಿ ಸೋಮನಾಥ ದೇವಾಲಯವನ್ನು ಪುನರ್ನಿರ್ಮಿಸಲಾಯಿತು. 1947ರ ದೀಪಾವಳಿಯ ಸಮಯದಲ್ಲಿ, ಸರ್ದಾರ್ ಪಟೇಲ್ ದೇವಾಲಯಕ್ಕೆ ಭೇಟಿ ನೀಡಿ ಅದನ್ನು ನವೀಕರಿಸಲು ಸಂಕಲ್ಪ ಮಾಡಿದ್ದರು. ದೇವಾಲಯದ ಭವ್ಯ ಉದ್ಘಾಟನೆಯು 1951ರ ಮೇ 11 ರಂದು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ನಡೆದಿತ್ತು. ಈ ದಿನ ಸರ್ದಾರ್ ಪಟೇಲ್ ಅವರ ಕನಸನ್ನು ನನಸಾಗಿಸಿದ ದಿನ ಎಂದೂ ಅವರು ಬಣ್ಣಿಸಿದ್ದಾರೆ.

ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಈ ಸಮಾರಂಭದ ಬಗ್ಗೆ ಉತ್ಸಾಹ ತೋರಲಿಲ್ಲ. ಇದು ಭಾರತದ ಪ್ರತಿಷ್ಠೆಗೆ ಹಾನಿಕಾರಕ ಎಂದು ಕರೆದರೂ, ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ದೃಢವಾಗಿ ನಿಂತು ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದೂ ಅವರು ಉಲ್ಲೇಖಿಸಿದ್ದಾರೆ.

'ನಮ್ಮ ಕಲೆ, ಸಂಸ್ಕೃತಿ, ಸಂಗೀತ ಸೇರಿದಂತೆ ಹಲವಾರು ಉತ್ಸವಗಳು ಜಾಗತಿಕವಾಗಿ ಬೆಳೆಯುತ್ತಿವೆ. ಯೋಗ ಮತ್ತು ಆಯುರ್ವೇದವು ವಿಶ್ವದಾದ್ಯಂತ ಪ್ರಭಾವ ಬೀರುತ್ತಿದ್ದು, ಆರೋಗ್ಯಕರ ಜೀವನವನ್ನು ಹೆಚ್ಚಿಸುತ್ತಿದೆ. ಹಾಗೆಯೇ ಹಲವು ಜಾಗತಿಕ ಸವಾಲುಗಳಿಗೆ ಭಾರತದಿಂದ ಪರಿಹಾರ ಸಿಗುತ್ತಿದೆ' ಎಂದು ಮೋದಿ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries